ಭಕ್ತಿಭಾವದಿಂದ ಪೂಜಿಸಿದರೆ ಭಗವಂತ ಒಲಿವನು
ಕೆಂಭಾವಿ:ಆ.6:ಶ್ರಾವಣ ಮಾಸದಲ್ಲಿ ಶಿವ ಮತ್ತು ಮಾತಾ ಪಾರ್ವತಿಯನ್ನು ಭಕ್ತಿ ಭಾವದಿಂದ ಪೂಜಿಸುವ ಭಕ್ತರ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅರ್ಚಕ ಪ್ರಶಾಂತ ಹಿರೇಮಠ ಹೇಳಿದರು.
ಪಟ್ಟಣದ ಸೊನ್ನದ ಬಡಾವಣೆಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರ ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಮಾತನಾಡಿದರು. ಶ್ರಾವಣ ಮಾಸದ ಮೊದಲ ಸೋಮವಾರವನ್ನು ಅತ್ಯಂತ ಶುಭಕರವಾದ ದಿನ ಎಂದು ಪರಿಗಣಿಸಲಾಗುತ್ತದೆ. ಇಂದು ಶಿವನಿಗೆ ಪೂಜೆ ಮಾಡಿದರೆ ಹಲವು ರೀತಿಯ ಆಶೀರ್ವಾದಗಳು ಸಿಗುತ್ತವೆ. ಶ್ರಾವಣ ಮಾಸದಲ್ಲಿ ತಿಂಗಳ ಉದ್ದಕ್ಕೂ ವಿಶೇಷ ಪೂಜೆ ಮತ್ತು ವಿಧಾನಗಳು ಮಾಡಲಾಗುತ್ತದೆ ಎಂದು ತಿಳಿಸಿದರು.
ಇಂದಿನಿಂದ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಗುತ್ತದೆ. ಭಕ್ತಾಧಿಗಳು ಸಮಯಕ್ಕೆ ಸರಿಯಾಗಿ ಬಂದು ಪೂಜೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವರಾಜ ಬೈಚಬಾಳ, ರಮೇಶ ಸಾಸಾಬಾಳ, ಸೋಮು, ವೀರೇಶ ಬೈಚಬಾಳ, ಮಲ್ಲನಗೌಡ ಪಾಟೀಲ, ನಾಗರಾಜ ಮಾಲಗತ್ತಿ, ಗುಡದಯ್ಯ ದಾವಣಗೆರೆ, ಶ್ರೀಶೈಲ ಕೊತಿನ್, ಪ್ರಕಾಶ ಬೈಚಬಾಳ, ವೀರಭದ್ರ ಸೇರಿದಂತೆ ಇತರರಿದ್ದರು.