ಆಯುಶ್ ಡಿಗ್ಗಿಗೆ ಚಿನ್ನದ ಪದಕ
ಕಲಬುರಗಿ:ಆ.6: ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬೆಂಗಳೂರಿನ ವಿಜಯನಗರ ನಿವಾಸಿ ಆಯುಶ್ ಡಿಗ್ಗಿ ರಾಜ್ಯ ಮಟ್ಟದ ಅಥ್ಲೇಟಿಕ್ಸನಲ್ಲಿ ಚಿನ್ನದ ಪದಕ ಪಡೆದಿದ್ದಾನೆ.
ಆಗಷ್ಟ್ 3 ಮತ್ತು 4 ರಂದು ಬೆಂಗಳೂರಿನ ಕಂಠೀರವ ಕೀಡಾಂಗಣದಲ್ಲಿ ಕರ್ನಾಟಕ ಅಥ್ಲೇಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕಿಡ್ಸ್ ಅಥ್ಲೇಟಿಕ್ಸ್ ಮೀಟ್ ಸ್ಪರ್ಧೆಯ 8 ವರ್ಷಗಳ ವಯೋಮಾನದ ಒಳಗಿನ ಮಕ್ಕಳ ಲಾಂಗ್ ಜಂಪ್‍ನಲ್ಲಿ 2.92 ಮೀಟರ್ ಉದ್ದ ಜಿಗಿಯುವ ಮೂಲಕ ಚಿನ್ನದ ಪದಕ ಪಡೆದಿದ್ದಾನೆ.
ಬೆಂಗಳೂರಿನ ವಿಜಯನಗರದ ನಿವಾಸಿಗಳಾಗಿರುವ ರುದ್ರವಾಡಿ ಗ್ರಾಮದ ಶಿವಲಿಂಗಪ್ಪ ಮತ್ತು ಸ್ನೇಹಾ ದಂಪತಿಯ ಮಗನಾದ ಆಯುಶ್ 2ನೇ ತರಗತಿಯಲ್ಲಿ ಓದುತ್ತಿದ್ದು ದಿ ನ್ಯೂ ಕೇಂಬ್ರಿಡ್ಜ್ ಆಂಗ್ಲ್ ಮಾಧ್ಯಮ ಶಾಲೆಯನ್ನು ಅಥ್ಲೇಟಿಕ್ಸ್‍ನಲ್ಲಿ ಪ್ರತಿನಿಧಿಸಿದ್ದ.
ಆಯುಶ್‍ನ ಸಾಧನೆಯು ಅವನ ಶಾಲೆ, ಕಲಬುರಗಿ ಜಿಲ್ಲೆ ಮತ್ತು ಸ್ವಗ್ರಾಮಕ್ಕೆ ಹೆಮ್ಮೆ ತಂದಿದೆ ಮಾತ್ರವಲ್ಲದೆ ಅವನ ಗೆಳೆಯರಿಗೆ ಮತ್ತು ಅಥ್ಲೆಟಿಕ್ಸ್‍ನಲ್ಲಿ ತಮ್ಮ ಛಾಪನ್ನು ಮೂಡಿಸಲು ಅಪೇಕ್ಷಿಸುವ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದೆ- ಶಿವಲಿಂಗಪ್ಪ ಡಿಗ್ಗಿ, ಆಯುಶ್ ತಂದೆ