ವಿಶ್ವಕರ್ಮ ಸಮಾಜ ಅಭಿವೃದ್ಧಿಗೆ ಒಗ್ಗೂಡಿ : ಬಾಬುರಾವ ಸುವರ್ಣಕರ್
ಔರಾದ್ :ಆ.6: ತನ್ನದೇ ಆದ ಪರಂಪರೆ, ಸಂಸ್ಕøತಿ ಹೊಂದಿರುವ ವಿಶ್ವಕರ್ಮ ಸಮಾಜ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕಾದ ಅಗತ್ಯತೆ ಇದ್ದು ಸಮಾಜ ಅಭಿವೃದ್ಧಿಗೆ ಸರ್ವರೂ ಬಾಂಧವ್ಯದಿಂದ ಒಗ್ಗೂಡಿ ಕಾರ್ಯ ಮಾಡಬೇಕಾಗಿದೆ ಎಂದು ಶ್ರೀ ಕಾಳಿಕಾ ಮಾತಾ ವಿಶ್ವಕರ್ಮ ಚಾರಿಟೇಬಲ ಟ್ರಸ್ಟ್ ಅಧ್ಯಕ್ಷ ಬಾಬುರಾವ ಸುವರ್ಣಕರ್ ಹೇಳಿದರು.
ಭಾನುವಾರ ಪಟ್ಟಣದಲ್ಲಿ ನಡೆದ ವಿಶ್ವಕರ್ಮ ಸಮಾಜದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ವರ್ಷಗಳಿಂದ ಶ್ರೀ ಕಾಳಿಕಾ ಮಾತಾ ವಿಶ್ವಕರ್ಮ ಚಾರಿಟೇಬಲ ಟ್ರಸ್ಟ್ ಸಂಘಟಿತವಾಗಿ ಸಮಾಜ ಕಾರ್ಯದಲ್ಲಿ ತೊಡಗಿದೆ, ಸಮಾಜದ ಹೆಸರಿನಲ್ಲಿ ಅನೇಕ ಸಂಘಟನೆಗಳು ಇದ್ದು ಎಲ್ಲರೂ ಒಗ್ಗೂಡಿ ಸಮಾಜದ ಏಳಿಗೆಗೆ ಶ್ರಮಿಸಬೇಕು, ಕೆಲವುಕಾಣದ ಕಾರಣಗಳಿಂದ ಜ್ಞಾನದ ಕೊರತೆಯಿಂದ ಒಡೆದು ಹೊದ ವಿಶ್ವಕರ್ಮ ಸಮಾಜ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದಾಗಬೇಕಾಗಿದೆ ಎಂದರು.
ಈಗಾಗಲೇ ನಮ್ಮ ಟ್ರಸ್ಟ್ ಹೆಸರಿನಲ್ಲಿ ವಿಶ್ವಕರ್ಮ ಸಮಾಜದ ಭವನ ನಿರ್ಮಾಣಕ್ಕಾಗಿ ತುಕಾರಾಮ ಪಾಂಚಾಳ ಅವರು 246 ಚ.ಮೀ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಎಲ್ಲ ಸಮಾಜ ಬಾಂಧವರು ಒಗ್ಗೂಡಿ ಶಾಸಕರಿಗೆ ಭವನ ನಿರ್ಮಾಣಕ್ಕೆ ಮನವಿ ನೀಡಿದ್ದು, ಕೆಲವೇ ದಿನಗಳಲ್ಲಿ ಭವನ ನಿರ್ಮಾಣವಾಗಲಿದೆ. ಕೆಲವರು ಹೊಸ ಸಂಘಟನೆ ಹುಟ್ಟುಕೊಂಡಿದೆ ಎಂದು ಗೊಂದಲದಲ್ಲಿದ್ದು ಯಾವುದೇ ಕಾರಣಕ್ಕೂ ಸಮಾಜ ಇಬ್ಬಾಗ ಆಗಲ್ಲ ಟ್ರಸ್ಟ್ ಹಾಗೂ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಲಿದೆ. ಆದ್ದರಿಂದ ಸಮಾಜ ಬಾಂಧವರು ಭಿನ್ನಾಭಿಪಾತ್ರಯಗಳನ್ನು ಮರೆತು ಪರಸ್ಪರ ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಕಾಶಿನಾಥ ಮಹಾರಾಜ ಹಂದಿಕೇರಾ, ವೆಂಕಟ ಪಾಂಚಾಳ ಬಾದಲಗಾಂವ, ತುಕಾರಾಮ ಪಾಂಚಾಳ, ಸಂತೋಷ ಮಾಣಿಕ ಚಿಂತಾಕಿ, ಆನಂದ ಪಾಂಚಾಳ, ಭದ್ರಿನಾಥ ಪಾಂಚಾಳ, ನರಸಿಂಗ ಪಾಂಚಾಳ, ಸಂತೋಷ ಪಾಂಚಾಳ, ವಿಷ್ಣುಕಾಂತ, ಸೋಮನಾಥ ಅರವಿಂದ, ಅಂಬ್ರೇಶ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.