ಶಂಕರಲಿಂಗ ಶಿವಾಚಾರ್ಯರಿಂದ ಮೌನ ತಪೋನುಷ್ಠಾನ
ಔರಾದ್ :ಆ.6: ಶ್ರೀ ದತ್ತ ಸಾಯಿ ಶನೀಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪೂಜ್ಯ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ನೇರೆಯ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೆಗಲೂರ ತಾಲೂಕಿನ ಕೋಕಲಗಾಂವ ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದಲ್ಲಿ ಮೌನ ತಪೋನುಷ್ಠಾನ
ಕೈಗೊಂಡಿದ್ದಾರೆ.
ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ಬಾಹ್ಯಾಕಾಶ ಭಕ್ತರ ಶ್ರೇಯಸ್ಸು ಹಾಗೂ ಲೋಕ ಕಲ್ಯಾಣಕ್ಕಾಗಿ ಸೋಮವಾರ ಅ.08 ರಿಂದ ಅ.26ರ ವರೆಗೆ 21 ದಿನಗಳ ಕಾಲ ಮೌನ ತಪೋನುಷ್ಠಾನ ಕೈಗೊಂಡಿದ್ದಾರೆ, ಎಂದು ಮಠದ ಮೂಲಗಳು ತಿಳಿಸಿವೆ.