ಕ್ರೀಡಾಕೂಟದಲ್ಲಿ ಸಾವಳೇಶ್ವರ ಶಾಲಾ ಮಕ್ಕಳು ಪ್ರಥಮ
ಆಳಂದ:ಆ.6: ಮಾದನಹಿಪ್ಪರಗಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ
ಸಾವಳೇಶ್ವರ ಗ್ರಾಮದ ಸರಕಾರಿ ಮಾದರಿ ಶಾಲೆಯ ವಿದ್ಯಾರ್ಥಿಗಳು ಕಬ್ಬಡಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ದೈಹಿಕ ಶಿಕ್ಷಣದ ಶಿಕ್ಷಕ ಮಹಾದೇವ ಗುಣಕಿ ಅವರು ತಿಳಿಸಿದ್ದಾರೆ.
ಶಾಲೆಯ ಬಾಲಕರು ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ, ,ಬಾಲಕರು ಥ್ರೋ ಬಾಲ್ ಪ್ರಥಮ. ಬಾಲಕಿಯರು ಸ್ಪರ್ಧೆಯಲ್ಲೂ ಕಬಡ್ಡಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
ಮಕ್ಕಳ ಈ ಸಾಧನೆಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಅರವಿಂದ್ ಭಾಸಗಿ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕ ಮಹಾದೇವ ಗುಣಕಿ, ಸಹ ಶಿಕ್ಷಕರಾದ ದಯಾನಂದ್, ರಾಜಶೇಖರ್, ಶಿವಲೀಲಾ ಶರಣಪ್ಪ, ಅವರು ಮಕ್ಕಳ ಕ್ರೀಡಾ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ.