ಪ್ರಾಣಿಗಳ ಹೆಚ್ಚು ಉತ್ಪಾದನೆಗೆ ಉತ್ತಮ ನಿರ್ವಹಣೆ ಬಹಳ ಮುಖ್ಯ:ಪ್ರೊ.ಕೆ.ಸಿ.ವೀರಣ್ಣ
ಬೀದರ, ಆ.06: ಪ್ರಾಣಿಗಳ ಹೆಚ್ಚು ಉತ್ಪಾದನೆಗೆ ಅವುಗಳ ಕ್ಷೇಮ ಮತ್ತು ಉತ್ತಮ ನಿರ್ವಹಣೆ ಬಹಳ ಮುಖ್ಯ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ ಪ್ರೋ.ಕೆ.ಸಿ.ವೀರಣ್ಣ ಹೇಳಿದರು.
ಅವರು ಇತ್ತೀಚಿಗೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ ಹಾಗೂ ಭಾರತೀಯ ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆ ಸಂಘ, ಕರ್ನಾಟಕ ಇವುಗಳ ಸಂಯುಕ್ತಾಶ್ರದಲ್ಲಿ ಬೀದರನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಪ್ರಾಣಿಗಳ ಕಲ್ಯಾಣ ಹಾಗೂ ಅವುಗಳ ಕ್ಷೇಮಾಭಿವೃದ್ಧಿ” ಕುರಿತು ಒಂದು ದಿನದ ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಸಂತ್ ಬಿರಾದಾರ, ಬಸವರಾಜ ಬತ್ತಮೂರ್ಗೆ ಹಾಗೂ ಡಾ. ಪಿ.ಟಿ. ರಮೇಶ್ ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಯಲಗೋಡ, ಪೆÇ್ರ. ಯು. ಕೃಷ್ಣಮೂರ್ತಿ, ಡಾ. ಚಂದ್ರಪಾಲ್, ಕಾರ್ಯಕ್ರಮವು ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರನ ಡೀನ್ ಡಾ. ಎಂ. ಕೆ. ತಾಂಡಲೆ, ಡಾ. ಸತೀಶಚಂದ್ರ ಬಿರಾದಾರ, ಡಾ. ಬಿ.ವಿ. ಶಿವಪ್ರಕಾಶ, ಡಾ. ಎಮ್.ಡಿ ಸುರಣಗಿ, ಡಾ. ದಿಲೀಪಕುಮಾರ. ಡಿ. ಹಾಗೂ ರಾಮಪ್ಪ ಕೋರವಾರ ಹಾಗೂ ಸಮ್ಮೇಳನಕ್ಕೆ ರಾಜ್ಯದ ಹಲವಡೆಯಿಂದ ಬಂದಂತಹ ಪಶು ವೈದ್ಯಾಧಿಕಾರಿಗಳು, ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು ಹಾಗೂ ಮಹಾವಿದ್ಯಾಲಯದ ಶಿಕ್ಷಕ ವೃಂದದವರು ಸೇರಿ ಸುಮಾರು 150 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ವಿವಿಧ ಪೆÇೀಸ್ಟರ್ ಸೆಶನ್ ಗಳನ್ನು ಆಯೋಜಿಸಲಾಗಿತ್ತು ಹಾಗೂ ಅವುಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಾಗೂ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಡಾ. ಅಂಬಿಕಾರವರು ಬರಮಾಡಿಕೊಂಡರು, ಡಾ. ಕೊಟ್ರೇಶ್ ಪ್ರಸಾದ್ ರವರು ನಿರೂಪಣೆ ಮಾಡಿದರು ಹಾಗೂ ಡಾ. ವಿದ್ಯಾಸಾಗರ ಅವರು ವಂದಿಸಿದರು.