ಪೋಟೋಗ್ರಫಿ ಕಾರ್ಯಾಗಾರ ಸಮಾರೋಪ
ಬೀದರ, ಆ.06: ಎಲ್ಲ ವಿದ್ಯಾರ್ಥಿಗಳು ತೆಗೆದಿರುವ ಛಾಯಾಚಿತ್ರಗಳು ಅತ್ಯುತ್ತಮವಾಗಿ ಮೂಢಿಬಂದಿವೆ. ಮುಂದಿನ ದಿನಗಳಲ್ಲಿ ಫೋಟೋ ಸ್ಪರ್ಧೆಗಳನ್ನು ಹೆಚ್ಚು ಹೆಚ್ಚಾಗಿ ಅಯೋಜಿಸಲಾಗುವುದು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಮ್.ಕೆ.ತಾಂಡಳೆ ಹೇಳಿದರು.
ಅವರು ಸೋಮವಾರ ನಗರದ ಕಮಠಾಣಾ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನ ಕೇಂದ್ರದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಪೋಟೋಗ್ರಫಿ ಕಾರ್ಯಾಗಾರ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಈ ವಿಶೇಷ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿದ ನಯವನ ಟ್ರಸ್ಟ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇಲ್ಲಿರುವ ವಿದ್ಯಾರ್ಥಿಗಳು ಬಹಳ ಬೇಗ ಕೌಶಲ್ಯವನ್ನು ರೂಢಿಸಿಕೊಂಡರು ಎಂದರು. ಈ ಪೋಟೋಗ್ರಫಿ ಕಾರ್ಯಾಗಾರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ದಿನಗಳ ಕಾಲ ವಿವಿಧ ತಜ್ಞರಿಂದ ಛಾಯಾಚಿತ್ರ ತೆಗೆಯುವ ವಿವಿಧ ಆಯಾಮಗಳ ಕುರಿತು ಕಲಿತರು.
ಈ ಕಾರ್ಯಕ್ರಮದಲ್ಲಿ ನಯಾವನ ಟ್ರಸ್ಟ್‍ನ ಕಾರ್ಯದರ್ಶಿ ಪ್ರೊ.ಐವಾನ್ ಡಿಸೋಜಾ, ಟ್ರಸ್ಟ್‍ನ ಸಂಪನ್ಮೂಲ ವ್ಯಕ್ತಿ ಅನಿಲ್, ಗೌರೀಶ ಹಾಗೂ ಡಾ.ಶ್ರೀಕಾಂತ ಕುಲಕರ್ಣಿ, ಡಾ.ಮಲ್ಲಿನಾಥ ಚೌಡಾಪೂರ, ಡಾ.ಚನ್ನಪ್ಪ ಗೌಡ ಬಿರಾದರ್, ಡಾ.ಕೋಟ್ರೇಶ್ ಪ್ರಸಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.