ಧರ್ಮಸ್ಥಳ ಸಂಸ್ಥೆಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ 2.50 ಲಕ್ಷ ಅನುದಾನ ವಿತರಣೆ
ಅಫಜಲಪುರ:ಆ.6: ತಾಲೂಕಿನ ಚವಡಾಪುರ ವಲಯದ ಬಂದರವಾಡ ಕಾರ್ಯಕ್ಷೇತ್ರದಲ್ಲಿರುವ ಶ್ರೀ ಸಾವಿರಲಿಂಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 2 ಲಕ್ಷ ರೂ. ಹಾಗೂ ಶ್ರೀ ಜಟ್ಟಿoಗರಾಯ ದೇವಸ್ಥಾನ ಜೀರ್ಣೋದ್ಧಾರಕ್ಕೆ 50 ಸಾವಿರ ರೂ. ಅನುದಾನ ವಿತರಣೆಯ ಡಿ.ಡಿ ಯನ್ನು ತಾಲೂಕು ಯೋಜನಾಧಿಕಾರಿ ಶಿವರಾಜ್ ಆಚಾರ್ಯ ಅವರು ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪಾದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಉಪಸ್ಥಿತಿಯಲ್ಲಿ ವಿತರಿಸಿದರು.
ಈ ವೇಳೆ ಗ್ರಾಮದ ಪ್ರಮುಖರಾದ ವಿಜಯಕುಮಾರ್ ಪಾಟೀಲ್, ಮಾಂತಪ್ಪ ಹೀರಾಪೂರ್, ಸಿದ್ದಣ್ಣ ಜಾಲಿಹಾಳ, ಚೆನ್ನಪ್ಪ ಹೂವಿನಹಳ್ಳಿ, ಬಾಬು ಸಾಹುಕಾರ್ ಹವಳಗಿ, ಶಿವಾನಂದ ಹೀರಾಪೂರ್, ರಾಜು ತೂಗಾoವ್, ಭಾಗಣ್ಣ ಸುರಾಪುರ್, ಮಲ್ಲಪ್ಪ ಕೋಲ್ಕಾರ್, ಕಲ್ಲಪ್ಪ ಹಳ್ಳಿ ಸೇರಿದಂತೆ ವಲಯದ ಮೇಲ್ವಿಚಾರ ಗುರಪ್ಪ ಗೌಡ ಉಪಸ್ಥಿತರಿದ್ದರು.