ಹಬೋಹಳ್ಳಿ : ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಕ್ಕೊತ್ತಾಯ ಮನವಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.06 ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಸಕ ಕೆ ನೇಮಿರಾಜ್ ನಾಯ್ಕ್ ಗೆ ಸೋಮವಾರ ಹಕ್ಕೊತ್ತಾಯ   ಮನವಿ ಸಲ್ಲಿಸಿದರು.
ಸಂಘದ ತಾಲೂಕ ಅಧ್ಯಕ್ಷ  ಹ್ಯಾಟಿ ಲೋಕಪ್ಪ ಮಾತನಾಡಿ ಅರ್ಹತೆಯ ಆಧಾರದ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು 2016ರ ಪೂರ್ವದಂತೆ ಮುಖ್ಯ ಶಿಕ್ಷಕರ ಹಾಗೂ ಹಿರಿಯ ಮುಖ್ಯ ಶಿಕ್ಷಕರು ಹುದ್ದೆ ಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಭಡ್ತಿ ನೀಡಬೇಕು. 2017ರಲ್ಲಿ ನಿಯಮಾವಳಿ ಮಾಡುವ ಮೂಲಕ ಅನ್ಯಾಯ ವಾಗಿದೆ. ಹಳೆಯ ನಿಯಮವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.    ಈ ವೇಳೆ ನೂತನವಾಗಿ ಬಂದಿರುವ ತಹಶೀಲ್ದಾರ್ ಆರ್ ಕವಿತಾ  ಕೂಡ ಹಾಜರಿದ್ದರು.   ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಕೊಟ್ರಪ್ಪ, ಉಪಾಧ್ಯಕ್ಷರಾದ ಹನುಮರೆಡ್ಡಿ, ದಾದೀಬಿ, ಖಜಾಂಚಿ ಟಿ ಸೋಮಶೇಖರ, ಸಹ ಕಾರ್ಯದರ್ಶಿಗಳು ಇಟಿಗಿ ಮಂಜುನಾಥ್, ಶಾಂತಕುಮಾರಿ, ಸಂಘಟನ ಕಾರ್ಯದರ್ಶಿ ಇಟಗಿ ಪ್ರಭಾಕರ, ಕೆಎಂ ನಿರ್ಮಲ, ಹರೀಶ ದೀಪಿಕಾ, ಮಹಾಂತೇಶ್ ನಾಯ್ಕ್ ಇತರರಿದ್ದರು