ಗ್ರಾ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಗಡ್ಡಿ ನಾಗರಾಜ ಆಯ್ಕೆ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ : ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷರಾಗಿ ಮಾನ್ಯರ ಮಸಲವಾಡ ಗ್ರಾ.ಪಂ. ಸದಸ್ಯ ನಾಗರಾಜ ಗಡ್ಡಿ ಆಯ್ಕೆಯಾಗಿದ್ದಾರೆ.
ತಾ.ಪಂ. ರಾಜೀವ್ ಗಾಂಧಿ ಸಭಾಂಗಣದಲ್ಲಿ ಜರುಗಿದ ಆಯ್ಕೆ ಸಭೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಭರಮಪ್ಪ ಕುಂಚೂರು, ಪ್ರಧಾನ ಕಾರ್ಯದರ್ಶಿ ಸುಜಾತ, ನಾಗಮ್ಮ, ತಿಪ್ಪೇಶ ನಾಯ್ಕ, ಅರುಣುಕುಮಾರ, ಶಿವಮೂರ್ತಿ, ದೇವ್ಲಾನಾಯ್ಕ, ನಾಗರಾಜ ತಿಗರಿ, ಕೋಟೆಪ್ಪ, ಮಮತಾ ತಳವಾರ, ಕುಸುಮ ಸೇರಿದಂತೆ ಇತರರಿದ್ದರು.