ನೇಮಕಾತಿ ನಿಯಮಗಳ ಅವೈಜ್ಞಾನಿಕ ಅಂಶ ರದ್ದುಪಡಿಸಲು ಆಗ್ರಹ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ : ಹೊಸ ವೃಂದ ಹಾಗೂ ನೇಮಕಾತಿ ನಿಯಮಗಳಿಂದ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ನೇಮಕಾತಿ ನಿಯಮಗಳ ಅವೈಜ್ಞಾನಿಕ ಅಂಶಗಳನ್ನು ರದ್ದುಪಡಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಹಶೀಲ್ದಾರರ ಮೂಲಕ ಸೊಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2017ರ ವೃಂದ ಹಾಗೂ ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮುಂಚೆ ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು. ಪದವಿ ಪೂರೈಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ನಾಮಕರಣ ಮಾಡಬೇಕು ಎಂದು ಶಿಕ್ಷಕರು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಯು. ಆನಂದ, ಕಾರ್ಯದರ್ಶಿ ವಿ.ಹೆಚ್ ಯೇಸು, ಉಪಾಧ್ಯಕ್ಷ ಸಿ.ಮೈಲಾರಿ, ಖಜಾಂಚಿ ಪಕ್ಕೀರ ಸಾಬ್,
ಮಹಿಳಾ ಘಟಕದ ಜಿಲ್ಲಾ ಸಹ ಕಾರ್ಯದರ್ಶಿ ಸಿದ್ದಮ್ಮ, ಉಪಾಧ್ಯಕ್ಷೆ ವಿನೋದಕುಮಾರಿ, ತಾಲೂಕು ಸಂಘಟನಾ ಕಾರ್ಯದರ್ಶಿ ಸರೋಜಮ್ಮ, ಸಹಕಾರ್ಯದರ್ಶಿ ಎನ್.ಡಿ.ರೇಖಾ, ಮಾಜಿ ಅಧ್ಯಕ್ಷ ವಿ.ಬಿ.ಜಗದೀಶ, ನಿರ್ದೇಶಕ ಚಂದ್ರಪ್ಪ ತಳವಾರ, ಸಂಘಟನಾ ಕಾರ್ಯದರ್ಶಿ ಮಹಾಂತೇಶ್ ಇದ್ದರು.