ಹಬೋಹಳ್ಳಿ : 2 ವರ್ಷ 7 ತಿಂಗಳ ಬಳಿಕ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.06 ಪಟ್ಟಣದ ಪುರಸಭೆಗೆ ಚುನಾವಣೆ ನಡೆದು ಸದಸ್ಯರಾಗಿ ಆಯ್ಕೆಯಾಗಿ ಬರೋಬ್ಬರಿ 2 ವರ್ಷ 7 ತಿಂಗಳ ಬಳಿಕ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ
 ಈಗ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ , ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗ ಮಹಿಳೆಗೆ ಮೀಸಲಾಗಿದೆ.
 ಒಟ್ಟು 23 ಸ್ಥಾನಗಳಿಗೆ ಡಿ. 27,  2021 ರಂದು ಚುನಾವಣೆ ನಡೆದು ಡಿ. 30 ಚುನಾವಣೆಯ ಫಲಿತಾಂಶ ಹೊರಬಿದಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷದ 12 ಬಿಜೆಪಿಯ 11 ಜನ ಸದಸ್ಯರಾಗಿ ಆಯ್ಕೆಯಾಗಿದ್ದು . ಭಾರಿ ಜಿದ್ದಾಜಿದ್ದಿನಿಂದ ಕೂಡಿದೆ ಲೋಕಸಭಾ ಮತ್ತು ವಿಧಾನಸಭಾ ಸದಸ್ಯರು ಮತದಾನದ ಹಕ್ಕು ಹೊಂದಿರುವುದರಿಂದ ಅಧ್ಯಕ್ಷರು ಯಾವ ಪಕ್ಷದವರು ಆಗುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ. 
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗದೆ ಹಲವು ತಿಂಗಳು ಕಾಲ ಪುರಸಭೆಯಲ್ಲಿ ಬಾಡಿ ಇಲ್ಲದೆ ಸದಸ್ಯರು ನಿರಾಶೆಗೊಂಡಿದ್ದರು. ಮೀಸಲಾತಿಯ ಬಗ್ಗೆ ಜಾತಕ ಪಕ್ಷಿ ಯಂತೆ ಕಾಯುತ್ತಾ ಕುಳಿತಿದ್ದವರಿಗೆ ಕೊನೆಗೂ ಮುಖದಲ್ಲಿ ಉತ್ಸಾಹ ಕಂಡು ಬಂದಿದೆ.