ಗೆದ್ದ ವಕೀಲರಿಂದ ಗುರುವಾರ ಪದಗ್ರಹಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಆ 06 : ಇತ್ತೀಚೆಗೆ ನಡೆದ ಬಳ್ಳಾರಿ ವಕೀಲರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳು ಆ. 8 ಗುರುವಾರದಂದು ಪದಗ್ರಹಣ ಮಾಡಲಿದ್ದಾರೆಂದು ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಿ.ಎಂ.ಗುರುಬಸವರಾಜ್ ತಿಳಿಸಿದ್ದಾರೆ.
ಅಂದು ಆಯ್ಕೆಯಾದ ನೂತನ ಕಾರ್ಯಕಾರಿ ಸಮಿತಿ ಸದಸ್ಯರು ಸಹ ಉಪಸ್ಥಿತಿರಿರಲಿದ್ದಾರೆ.  ಸಂಘದ ನೂತನ ಕಟ್ಟಡಲ್ಲಿ ನಡೆದ ಈ ಮೊದಲ ಚುನಾವಣೆ ಒಂದು ಸ್ಮರಣೀಯವಾಗಲಿದೆಂದು ಅವರು ಹೇಳಿದ್ದಾರೆ.