ಶ್ರಾವಣ ಸಂಜೆ ಕಾರ್ಯಕ್ರಮ
ಲಕ್ಷ್ಮೇಶ್ವರ,ಆ.6: ಪಟ್ಟಣದ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ತಾಲೂಕ ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕಮಹಾದೇವಿ ಬಳಗ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ ಸೇರಿದಂತೆ ಮತ್ತಿತರ ಬಹಳ ಸಂಘಟನೆಗಳ ಸಹಯೋಗದಲ್ಲಿ 19ನೇ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಶ್ರೇಷ್ಠ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನಾಗರಾಜ ಅರಳಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ನಮ್ಮ ಸಂಸ್ಕೃತಿ ಪರಂಪರೆ ಉಳಿಯಬೇಕಾದರೆ ಧರ್ಮಾಚರಣೆಗಳು ಹೆಚ್ಚು ಹೆಚ್ಚು ಸಂಘಟನೆಯಾಗಬೇಕು ಶ್ರಾವಣ ಮಾಸ ಒಂದು ತಿಂಗಳ ಕಾಲ ನಿರಂತರವಾಗಿ ಪುರಾಣ ಪ್ರವಚನ ಶರಣರ ತತ್ವ ಸಿದ್ಧಾಂತಗಳ ಆಲಿಕೆಯ ಮುಖಾಂತರ ಮನ ಮತ್ತು ಮನಸು ಪ್ರಫುಲ್ಲ ವಾಗುತ್ತವೆ ಎಂದು ಹೇಳಿದರು.
ಸಾನಿಧ್ಯವಹಿಸಿದ್ದ ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಶ್ರೀಗಳು ನಮ್ಮ ನಾಡು ಸಾಧು ಸಂತರು ಸತ್ಪುರುಷರು ಋಷಿಮುನಿಗಳು ತಪೆÇೀಗೈದ ಪುಣ್ಯಭೂಮಿ ಇದು ಧರ್ಮ ಪರಂಪರೆ ನಾಡಾಗಿದ್ದು ಪ್ರತಿಯೊಬ್ಬರು ಯಾವ ಶರಣರು ಸಮಾಜ ಸುಧಾರಣೆಗಾಗಿ ವಚನಗಳ ಮೂಲಕ ಜಾಗೃತಿಗೊಳಿಸಿದರು ಅವುಗಳನ್ನು ಮತ್ತೆ ಜನಮನದಲ್ಲಿ ಬಿಂಬಿಸಲು ಈ ಮಹಿಳಾ ವೇದಿಕೆ ನಿರಂತರ ಒಂದು ತಿಂಗಳ ಕಾಲ ಶರಣರ ಮೌಲ್ಯಧಾರಿತ ಚಿಂತನೆಗಳು ಎಂಬ ಗೋಷ್ಠಿಯ ಮುಖಾಂತರ ಒತ್ತು ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ ಅವರು ಪಟ್ಟಣದಲ್ಲಿ ಕಳೆದ 19 ವರ್ಷಗಳಿಂದ ಸತತವಾಗಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಮಹಿಳಾ ಶಕ್ತಿಗೆ ಮತ್ತು ಸಂಘಟನೆಗೆ ಒಂದು ಸಾಕ್ಷಿಯಾಗಿದೆ ಎಂದರು ಪ್ರತಿನಿತ್ಯ ಮಹಿಳೆಯರು ತಮ್ಮ ದಿನನಿತ್ಯ ನಿತ್ಯದ ಎಲ್ಲಾ ಕಾಯಕಗಳು ಮುಗಿಸಿ ಶರಣರು ಸಾರಿದ ತತ್ವ ಸಿದ್ಧಾಂತ ಮತ್ತು ವಚನಗಳನ್ನು ಮತ್ತೆ ನೆನಪಿಸುತ್ತಿರುವುದು ಅತ್ಯಂತ ಪ್ರಶಂಸನೀಯ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಎಸ್‍ಎಫ್ ಆದಿಯವರು ಶರಣರಲ್ಲಿ ಸಾಮಾಜಿಕ ಚಿಂತನೆ ಕುರಿತು ಮಾತನಾಡಿದರು ಅತಿಥಿಗಳಾಗಿ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಪರಶುರಾಮ ಬಾರ್ಕಿ ಚಂದ್ರಣ್ಣ ಮಹಾಜನ ಶೆಟ್ಟರ ಡಾಕ್ಟರ್ ಶಿವಾನಂದ ಹೂವಿನ ಆಗಮಿಸಿದ್ದರು ಇದೇ ಸಂದರ್ಭದಲ್ಲಿ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಪೂರ್ಣಾಜಿ ಕರಾಟೆ ಗಾಣಿಗ ರತ್ನ ಪ್ರಶಸ್ತಿ ಪುರಸ್ಕೃತ ಅಶೋಕ ಸೊರ್ಟೂರ್ ಅವರನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷ ನಿರ್ಮಲ ಅರಳಿ ಸ್ವಾಗತಿಸಿದರೆ ಲಲಿತಕ್ಕ ಕೆರಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು ರತ್ನಕ್ಕ ಕರ್ಕಿ ನಿರೂಪಿಸಿದರು.