ನಾಮದೇವ ಮಹಾರಾಜರ ಪುಣ್ಯಸ್ಮರಣೆ
ನವಲಗುಂದ,ಆ6 : ಪಟ್ಟಣದ ಪಾಂಡುರಂಗ ಹರಿಮಂದಿರ ದೇವಸ್ಥಾನದಲ್ಲಿ ವಿಠಲ ರುಕ್ಷ್ಮಿಣಿಯರ ಪಾದುಕೆ ಮತ್ತು ಜ್ಞಾನೇಶ್ವರಿ ಗ್ರಂಥವನ್ನು ಪಲ್ಲಕ್ಕಿಯಲ್ಲಿಟ್ಟು ಹಾಡು, ಭಜನೆ, ಕೀರ್ತನೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ಜರುಗುವ ಮೂಲಕ ನಾಮದೇವರ ಮಹರಾಜರ ಪುಣ್ಯಸ್ಮರಣೆ ನಡೆಯಿತು.
ಮೊದಲನೇ ದಿನದಂದು ಜ್ಞಾನೇಶ್ವರಿ ಗ್ರಂಥವನ್ನು ದೇವಸ್ಥಾನದಲ್ಲಿ ಸ್ಥಾಪಿಸಿ ನಂತರ ಜ್ಞಾನೇಶ್ವರ ಪಾರಾಯಣ, ಹರಿಪಾಠ, ಕೀರ್ತನೆ, ಭಜನೆ, ಸಂಜೆ ಸಂತ ಮಹಾರಾಜರಿಂದ ಪ್ರವಚನ ಜರುಗಿತು.
ಕೀರ್ತನಾಕಾರರಾದ ಶಿರಕೋಳ ಸಂತರು, ಲಕ್ಷ್ಮೀಶ್ವರದ ನಾರಾಯಣ ಭೀಸೆ, ಬಂಕಾಪುರದ ಸರ್ವೇದ, ವಿಠಲ್ ಚೀಲಮ್ಮನವರ, ರಾಮದುರ್ಗದ ಧನು ಮಹರಾಜ ಸಂತರು ಕಾರ್ಯಕ್ರಮ ನಡೆಸಿಕೊಟ್ಟರು.
ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ಸತತ 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಂತ ಮಾಯಪ್ಪ ಚಿಲಮೂರ ಅವರಿಗೆ ಶ್ರೀ ಲಾಲಗುಡಿ ಮಾರುತಿ ದೇವಸ್ಥಾನ ಟ್ರಸ್ಟ ಕಮೀಟಿ ವತಿಯಿಂದ ಸನ್ಮಾನಿಸಲಾಯಿತು
ಈ ವೇಳೆ ಸಮುದಾಯದ ಹಿರಿಯರಾದ ಬಾಬಣ್ಣ ಗಾಯಕವಾಡ, ಸುನೀಲ ಪವಾರ, ರುದ್ರಪ್ಪ ರಾಮ ದುರ್ಗ, ಸಹದೇವಪ್ಪ ಗುಳೇದ, ಶ್ರೀಕಾಂತ ಕಡೆದ, ಹಿರಿಯ ಪತ್ರಕರ್ತ ಪುಂಡಲೀಕ್ ಮುಧೋಳ, ರಾಯನಗೌಡ ಪಾಟೀಲ್,ಅಣ್ಣಪ್ಪ ಬಾಗಿ, ಪ್ರಭು ಇಬ್ರಾಹಿಂಪುರ, ಮಂಜುನಾಥ್, ಅರೇರ ಚನ್ನಪ್ಪ ನಾಗರಳ್ಳಿ, ಸಂತೋಷ ಅಸುಂಡಿ,ನವೀನ ಹರಿಹರ, ಬಾಬು ಹಳ್ಳದ, ಮುನ್ನಾ ರಾಮದುರ್ಗ, ಇತರು ಪಾಲ್ಗೊಂಡಿದ್ದರು.