ಬಾಗಿನ ಅರ್ಪಣೆ
ಮುನವಳ್ಳಿ,ಆ6: ಕಳಸಾ ಬಂಡೂರಿ ನಾಲಾ ಮಲಪ್ರಭಾ ನದಿ ಜೋಡಣಾ ಹೋರಾಟ ಕೇಂದ್ರ ಸಮಿತಿ ವಲಯ ಘಟಕ ಮುನವಳ್ಳಿ ವತಿಯಿಂದ ಮಲಪ್ರಭಾ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮ ಸೋಮವಾರ ಜರುಗಿತು.
ಪಟ್ಟಣದ ಪಂಚಲಿಂಗೇಶ್ವರ ಕ್ರಾಸ್ ನಿಂದ ಮುಖ್ಯರಸ್ತೆಮೂಲಕ ವಿವಿಧ ವಾದ್ಯಮೇಳಗಳೋಂದಿಗೆ ಮೆರವಣಿಗೆ ಮೂಲಕ ಮಲಫ್ರಭಾ ನದಿಗೆ ತಲುಪಿ ಶ್ರೀ ಮುರುಘೇಂದ್ರ ಶ್ರೀಗಳು, ಮುಕ್ತಾನಂದ ಶ್ರೀಗಳು ಹಾಗೂ ಮಡಿವಾಳಯ್ಯ ಹಿರೇಮಠ ಶ್ರೀಗಳ ಸಾನಿಧ್ಯದಲ್ಲಿ ಅಂಬ್ರೀಷ ಯಲಿಗಾರ ದಂಪತಿ, ಶಿವಾನಂದ ಮಲಗೌಡ್ರ ದಂಪತಿ ಬಾಗಿನ ಅರ್ಪಿಸಿ ಪೂಜೆ ನೇರವೆರಿಸಿದರು.
ಪಂಚನಗೌಡ ದ್ಯಾಮನಗೌಡ್ರ, ಅಶೋಕ ಪಟ್ಟಣಶೆಟ್ಟಿ, ಕಳಸಾ ಬಂಡೂರಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವಿಜಯ ಕುಲಕರ್ಣಿ, ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ, ಪ್ರಕಾಶ ಕಾಮಣ್ಣವರ ಇತರರು ಉಪಸ್ಥಿತರಿದ್ದರು.