ಶಿಸ್ತು, ಬದ್ಧತೆಯಿಂದ ವೃತ್ತಿಯಲ್ಲಿಯಶಸ್ಸು ಪಡೆಯಲು ಸಾಧ್ಯ
ಸಂಜೆವಾಣಿ ವಾರ್ತೆ
ಹಿರಿಯೂರು: ಆ.೬; ಶಿಸ್ತು, ಬದ್ಧತೆಯಿಂದ ಕೆಲಸ ನಿರ್ವಹಿಸಿದಾಗ ನಮ್ಮ ವೃತ್ತಿಯಲ್ಲಿಯಶಸ್ಸು ಪಡೆಯಲು ಸಾಧ್ಯವಾಗುತ್ತದೆಎಂದುಚಿತ್ರದುರ್ಗಡಯಟ್‌ನ ಉಪ ಪ್ರಾಚಾರ್ಯಅಶ್ವಥ್ ನಾರಾಯಣ ಹೇಳಿದರು.ಹಿರಿಯೂರು ನಗರದ ಬಿ.ಆರ್.ಸಿ ಕಚೇರಿ ಸಭಾಂಗಣದಲ್ಲಿ ಹೊಸದಾಗಿ ನೇಮಕವಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ  ಆಯೋಜಿಸಿದ್ದ ಬುನಾದಿ ತರಬೇತಿಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದಅವರು ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು.ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು.ಇಲಾಖೆಯ ಆಶೋತ್ತರಗಳನ್ನು ಈಡೇರಿಸುವುದರ ಮೂಲಕ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು. ತರಬೇತಿ ಕಾರ್ಯಾಗಾರದ ನಿರ್ದೇಶಕರಾದ ಎಸ್.ಸಿ ಪ್ರಸಾದ್ ಮಾತನಾಡಿ, ಶಿಕ್ಷಕರಿಗೆ ಇಲಾಖೆ ಕಾರ್ಯಕ್ರಮಗಳನ್ನು ತಿಳಿಸುವ ಮೊದಲ ಹಂತವಾಗಿ ಬುನಾದಿ ತರಬೇತಿ ನೀಡಲಾಗುತ್ತದೆ. ತರಗತಿ ನಿರ್ವಹಣೆ, ರಚನಾವಾದತರಗತಿ, ಶಿಕ್ಷಕರ ಶಿಕ್ಷಣ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ, 5 ಇ ಮಾದರಿ ಬೋಧನಾ ವಿಧಾನ ವಿಷಯ ಕುರಿತು ತರಬೇತಿಯಲ್ಲಿ ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಲಿತ ಅಂಶಗಳನ್ನು ತರಗತಿಕೋಣೆಯಲ್ಲಿ ಅನುಷ್ಠಾನ ಮಾಡಬೇಕುಎಂದು ತಿಳಿಸಿದರು.ತರಬೇತಿ ಕಾರ್ಯಾಗಾರದಸಂಯೋಜಕಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಯು.ಸಿದ್ದೇಶಿ, ತಿಪ್ಪೇರುದ್ರಪ್ಪ, ಶಿವಣ್ಣ, ಖಲಂದರ್, ತಿಮ್ಮರಾಜು, ಬಿ.ಆರ್.ಪಿ ಚಿದಾನಂದ, ಬಿ.ಐ.ಆರ್.ಟಿ ಬಸವರಾಜು, ಸಿ.ಆರ್.ಪಿ ಪ್ರಸನ್ನಕುಮಾರ್, ಅರ್ಪಿತಾ ಮತ್ತು ಶಿಕ್ಷಕರು ಇದ್ದರು.