ಸ್ಮಶಾನದ ಬಳಿ ಗಾಂಜಾ ಮಾರಾಟ ಆರೋಪಿ ಬಂಧನ
ಬೆಂಗಳೂರು,ಆ.೬- ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮಡಿವಾಳ ಪೊಲೀಸರು ೪ ಲಕ್ಷ ಮೌಲ್ಯದ ೧೦ ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.
ಕಗ್ಗಲಿಪುರದ ಶೇಖರ್ ನಾಯ್ಡು ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಜು.೨೪ ರಂದು ಮಡಿವಾಳದ ಜಕ್ಕಸಂದ್ರ ಸ್ಮಶಾನದ ಬಳಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನಿಂದ ೪ ಲಕ್ಷ ಮೌಲ್ಯದ ೧೦ ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನಡೆಸಿದ ವಿಚಾರಣೆಯಲ್ಲಿ ಗಾಂಜಾವನ್ನು ಕಡಿಮೆ ಬೆಲೆಗೆ ತಂದು ಯುಮಜನತೆಗೆ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.
ಮಡಿವಾಳ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಮತ್ತವರ ಸಿಬ್ಬಂದಿಗಳ ಪಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
೨ ಕೆ.ಜಿ ೬೦೦ ಗ್ರಾಂ ಡ್ರಗ್ಸ್ :
ಯಲಹಂಕದಲ್ಲಿರುವ ಪೂರ್ಣಪಜ್ಞಾ ಶಾಲೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತನಿಂದ ೨ ಕೆ.ಜಿ ೬೦೦ ಗಾಂ ಗಾಂಜಾ, ಮೊಬೈಲ್ ಜಪ್ತಿ ಮಾಡಿ ನಡೆಸಿದ ವಿಚಾರಣೆಯಲ್ಲಿ ಮಾಡಲಾಗಿ ಆರೋಪಿಯು ಒರಿಸಾ ರಾಜ್ಯದವನಾಗಿದ್ದು, ಅಲ್ಲಿ ಕಡಿಮೆ ಬೆಲೆಗೆ ಗಾಂಜಾವನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಯಲಹಂಕ ಪೊಲೀಸ್ ಇನ್ಸಪೆಕ್ಟರ್ ಮತ್ತವರ ಸಿಬ್ಬಂದಿಯವರು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.