ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ಶಾಸಕರಿಗೆ ಮನವಿ
ಕಲಬುರಗಿ,ಆ.೬- ಕೆಸಿ ಮತ್ತು ರೂಲ್ ತಿದ್ದುಪಡಿ, (ಪಿಎಸ್‌ಟಿ ಜಿಪಿಟಿ) ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಲಬುರಗಿ ದಕ್ಷಿಣ ವಲಯದ ವತಿಯಿಂದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಮತ್ತು ತಹಸೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೇಡಿಕೆಯ ಮನವಿ ಪತ್ರ ಪ್ರತ್ಯೇಕವಾಗಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲಯ್ಯ ಗುತ್ತೆದಾರ, ಪ್ರಧಾನ ಕಾರ್ಯದರ್ಶಿಗಳಾದ ಬಾಬು ಮೊರ್ಯ, ದಕ್ಷಿಣ ವಲಯ ಕಲಬುರಗಿ ಅಧ್ಯಕ್ಷರಾದ ಈಶ್ವರ ಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ನವನಾಥ ಸಿಂದೆ ಕರ್ನಾಟಕ ರಾಜ್ಯ ಉರ್ದು ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಉಸ್ಮಾನ ಬಾಶಾ, ದಕ್ಷಿಣ ವಲಯ ಕಲಬುರಗಿ ಅಧ್ಯಕ್ಷರಾದ ಮಹಮ್ಮದ್ ರಬಾನಿ, ಪದಾದಿಕಾರಿಗಳಾದ, ಸಂತೋಷ ಗಂಗು, ನವಾಬ ಅಮೀನೊದಿನ, ಇಬ್ರಾಹಿಮ್ ಸಾಬ, ನೀಲಕಂಠ ಪಾಟೀಲ್, ಮಹಿಳೆಯರು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.