ಪತ್ರಿಕಾ ವಿತರಕರ ಸಮ್ಮೇಳನದ ಲಾಂಛನ ಅನಾವರಣ
ಸಂಜೆವಾಣಿ ವಾರ್ತೆ
ಜಗಳೂರು.ಆ.೬: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಹಾಗೂ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಸಹಯೋಗದಲ್ಲಿ ಸೆ. 8ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಪತ್ರಿಕಾ ವಿತರಕರ ನಾಲ್ಕನೇ ರಾಜ್ಯಮಟ್ಟದ ಸಮ್ಮೇಳನದ ಲಾಂಛನ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ತಪೋ ಕ್ಷೇತ್ರ ಕಣ್ವ ಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು. ಹಾಗೂ ಕ ರಾ ನಿ ಪ ಸಂಘದ ಜಿಲ್ಲಾಧ್ಯಕ್ಷ ಇ. ಎಂ ಮಂಜುನಾಥ್ ಹಾಗೂ ಪದಾಧಿಕಾರಿಗಳು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಎಸ್ ಬಡದಾಳ್ ಕ ರಾ ನಿ ಪ ಸಂಘದ ಫಕ್ರುದ್ದೀನ್, ಶ್ರೀನಿವಾಸ್ ತಾಲೂಕ ಅಧ್ಯಕ್ಷ ಜಿಎಸ್ ಚಿದಾನಂದ್ ಹಿರಿಯ ಪತ್ರಕರ್ತ ಕೊಟ್ರೇಶ್ ಜಗಳೂರಿನ ಪತ್ರಿಕ ವಿತರಕರಾದ ಸಿದ್ದೇಶ್ ಎಸ್ ಮಂಜುನಾಥ್ ಡಿ ಬಿ ಮಹಾಂತೇಶ ಎಂ ದಾವಣಗೆರೆ ಪತ್ರಿಕ ವಿತರಕರಾದ ಕೃಷ್ಣಮೂರ್ತಿಎ. ಎನ್. ಇತರ ವಿತರಕರು ಉಪಸ್ಥಿತರಿದ್ದರು