ಉಚಿತ ತಪಾಸಣೆಯ ಮೂಲಕ ಅನುಭಾವ ಶ್ರಾವಣ
ಸಂಜೆವಾಣಿ ವಾರ್ತೆ
ಹೊಳಲ್ಕೆರೆ ಆ.೬; ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ “ಅನುಭಾವ ಶ್ರಾವಣ” ಇಂದು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞವೈದ್ಯರುಗಳಿಂದ ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ “ಉಚಿತ ಆರೋಗ್ಯ ತಪಾಸಣಾ” ಶಿಬಿರ ನಡೆಸುವ ಮೂಲಕ ಆರಂಭವಾಯಿತು. ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ತಿçÃರೋಗ ತಜ್ಞರಾದ ಡಾ.ಅಂಕಿತ, ಡಾ.ರೂಬಿನ, ಆರ್ಥೋ ವಿಭಾಗದ  ಡಾ. ಭೋಪಾಲ್ ಇಅಂಡ್‌ಟಿ ವಿಭಾಗದ ಡಾ.ಮನೋಜï, ಆಫ್ತಲ್ ವಿಭಾಗದ  ಡಾ.ಭೀಮ್ ಸೇನ್, ಡಾ.ಶ್ರೀಕಾ, ಸರ್ಜರಿ ವಿಭಾಗದ ಡಾ. ಐಶ್ವರ್ಯ, ಚರ್ಮರೋಗ ತಜ್ಞರಾದ ಡಾ. ರಚನಾ, ಸಿಸ್ಟರ್ ಯಶೋಧಾ, ಮೂರ್ತಿ ಹಾಗೂ ಸಂಪರ್ಕಾಧಿಕಾರಿ ಪ್ರಸಾದ್ ಅವರುಗಳ ತಂಡ ಗ್ರಾಮದಲ್ಲಿ ಸುಮಾರು ೧೧೩ ಜನರ ವಿವಿಧ ಬಗೆಯ ಕಾಯಿಲೆಗಳಿಗೆ ಉಚಿತ ತಪಾಸಣೆ ಮಾಡಿ ಜತೆಗೆ ಔಷಧಿಯನ್ನು ವಿತರಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ನಿವೃತ್ತ ಶಿP್ಷÀಕರಾದ ಮಹದೇವಪ್ಪ, ಮೂಲೆಮನೆ ವೀರಭದ್ರಪ್ಪ, ಯು.ಆರ್. ಮಂಜುನಾಥ್, ಯು.ಎಸ್. ತಿಪ್ಪೇಸ್ವಾಮಿ, ರೈತಮುಖಂಡರಾದ ಸಿದ್ದವೀರಪ್ಪ, ಎಲ್.ಆರ್. ಮಹರುದ್ರಪ್ಪ, ಸಿ.ಡಿ. ಲೋಕೇಶ್, ಎಂ.ಕುಬೇರ್, ಜಿ.ಆರ್. ರಾಜಪ್ಪ, ವಕೀಲರಾದ ಪ್ರಸನ್ನ ಕುಮಾರ್, ಮೂಲೆಮನೆ ಪರಮೇಶ್ ಮತ್ತಿತರರು ಹಾಜರಿದ್ದರು.