ಪೌಷ್ಠಿಕ ಆಹಾರ ಸೇವಿಸಲು ಸಲಹೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೬;ಗರ್ಭೀಣಿ ತಾಯಂದಿರು ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಜಿಲ್ಲಾ ಪೌಷ್ಠಿಕ ಆಹಾರ ಮೇಲ್ವಿಚಾರಕ ಸಣ್ಣರಂಗಮ್ಮ ಸಲಹೆ ನೀಡಿದರು.ನಗರದ ಬಾರ್‌ಲೈನ್ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಯಿಯ ಎದೆಹಾಲು ಅಮೃತಕ್ಕೆ ಸಮ. ಇದು ದಿವ್ಯೌಷಧಿಯಾಗಿದ್ದು, ದೇವರ ಕೊಟ್ಟ ವರ. ಪ್ರತಿಯೊಬ್ಬ ತಾಯಿಯೂ ಆರು ತಿಂಗಳವರೆಗೆ ಎದೆಹಾಲು ಕುಡಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬುದ್ಧನಗರದ ಆರೋಗ್ಯ ಸಿಬ್ಬಂದಿಗಳಾದ ಗುರುಮೂರ್ತಿ, ಶ್ರೀನಿವಾಸ ಸೇರಿದಂತೆ ಆಶಾಕಾರ್ಯಕರ್ತರು, ಶಾಲಾ ಶಿಕ್ಷಕಿಯರು ಇದ್ದರು.