ನಿರುದ್ಯೋಗಿ ಮಹಿಳೆಯರು ತರಬೇತಿ ಸದುಪಯೋಗ ಪಡೆಸಿಕೊಳ್ಳಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೬;ನಿರುದ್ಯೋಗಿ ಮಹಿಳೆಯರು ಟೈಲರಿಂಗ್, ಕಂಪ್ಯೂಟರ್ ಆಧಾರಿತ ಎಂಬ್ರಾಯಡರಿ ತರಬೇತಿಯ ಸದುಪಯೋಗ ಪಡೆಸಿಕೊಂಡು ಸ್ವಾವಲಂಭಿ ಜೀವನ ನಡೆಸಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ ಹೇಳಿದರು.ಇತ್ತೀಚೆಗೆ ಚಿತ್ರದುರ್ಗ ನಗರದ ಜನಶಿಕ್ಷಣ ಕಚೇರಿಯಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಸ್ವ ಉದ್ಯೋಗ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಜನ ಶಿಕ್ಷಣ ಸಂಸ್ಥೆ 3 ವರ್ಷಗಳಿಂದ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೊಗ ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿ ನೀಡದೆ. ಟೈಲರಿಂಗ್ ಹಾಗೂ ಎಂಬ್ರಾಯಡರಿ ಜೊತೆಗೆ ಎಲೆಕ್ಟಿçÃಷಿಯನ್, ಪಂಬ್ಲಿAಗ್ ಸೇರಿದಂತೆ ಹಲವು ಉದ್ಯೋಗಗಳ ತರಬೇತಿ ಲಭ್ಯವಿದೆ. ಜಿಲ್ಲೆಯ ಯುವಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ತರಬೇತಿ ನಂತರ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳಿAದ ನೆರವು ದೊರಕಲಿದೆ ಎಂದರು.ಈ ವೇಳೆ ಜಿಲ್ಲಾ ಮಕ್ಕಳಾ ರಕ್ಷಣಾ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ್, ಕಾರ್ಯಕ್ರಮಾಧಿಕಾರಿ ಭರತ್ ಸೇರಿದಂತೆ ಮತ್ತಿರರು ಇದ್ದರು. ತರಬೇತಿ ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 6360710221ಕ್ಕೆ ಸಂಪರ್ಕಿಸಬಹುದು.