ಸ್ವಾರ್ಥ ಇಲ್ಲದ ಕಡೆ ಸಾಧನೆ ಹುಟ್ಟುತ್ತದೆ:ಶಾಸಕ ರಾಜುಗೌಡ
ತಾಳಿಕೋಟೆ:ಆ.೬: ನಿಸ್ವಾರ್ಥ ಭಾವನೆಯಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡರೆ ಎಂತಹದ್ದೇ ಕೆಲಸವಾಗಲಿ ಅದು ಸಲಿಸಾಗಿ ಕಾರ್ಯರೂಪಕ್ಕೆ ಬರಲಿದೆ ಅಂತಹ ನಿಸ್ವಾರ್ಥ ಭಾವನೆ ಹೊಂದಿದ ಮೈಲೇಶ್ವರ ಗ್ರಾಮದ ಜನರ ಶ್ರಮದ ಫಲ ಇಡೇರಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಹೇಳಿದರು.
ಸೋಮವಾರರಂದು ತಾಲೂಕಿನ ಮೈಲೇಶ್ವರ ಗ್ರಾಮದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಬಸವಣ್ಣ ನವರ ಕಾಲದಲ್ಲಿ ಮೈಲೇಶ್ವರ ಗ್ರಾಮದಲ್ಲಿ ನಿರ್ಮಾಣಗೊಂಡ ಶ್ರೀ ಬಸವೇಶ್ವರ ದೇವಸ್ಥಾನವು ಈ ಭಾಗದಲ್ಲಿ ಜನರ ಆರಾದ್ಯ ದೇವಸ್ಥಾನವಾಗಿದೆ ಸಾಕಷ್ಟು ಜನರು ಈ ದೇವಸ್ಥಾನದಲ್ಲಿ ಮಧುವೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲು ಬರುತ್ತಾ ಸಾಗಿದ್ದರು ಆದರೆ ದೈತ್ಯವಾದ ಮಂಟಪ ಇಲ್ಲದ್ದರಿಂದ ಇಕ್ಕಟ್ಟಿನ ಜಾಗೆಯಲ್ಲಿಯೇ ಮಧುವೆಗಳನ್ನು ಮಾಡಿಕೊಂಡು ಹೋಗುತ್ತಿದ್ದರು ಆದರೆ ಮೈಲೇಶ್ವರ ಗ್ರಾಮದ ಜನರ ಒಗ್ಗಟ್ಟು ಬಹಳೇ ದೊಡ್ಡದಾಗಿದೆ ಅವರ ಒಕ್ಕಟ್ಟಿನ ಫಲದಿಂದ ಸಾಕಷ್ಟು ದಾನಿಗಳು ಮುಂದೆ ಬಂದು ಸಹಾಯ ಹಸ್ತ ನೀಡುವದರೊಂದಿಗೆ ದೊಡ್ಡ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಹಕರಿಸಿದ್ದಾರೆ ಮೈಲೇಶ್ವರ ಗ್ರಾಮದಲ್ಲಿ ಕೇವಲ ೨೫೦ ಮನೆಗಳು ಇರುವ ಈ ಸಣ್ಣ ಗ್ರಾಮದಲ್ಲಿ ಇಂತಹ ಬೃಹತ್ ಕಲ್ಯಾಣ ಮಂಟಪ ನಿರ್ಮಾಣವಾಗಿರುವದು ಸಂತಸ ತಂದಿದೆ ಇದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಈ ಕಲ್ಯಾಣ ಮಂಟಪಕ್ಕೆ ಮಹಾದಾನಿ ಢವಳಗಿಯ ಕೋರಿಯವರು ೪೦ ಲಕ್ಷ ಹಣವನ್ನು ದೇಣಿಗೆ ನೀಡಿದ್ದಾರೆ. ಹಿಂದಿನ ಶಾಸಕರು ತಮ್ಮ ಶಾಸಕರ ಅನುದಾನದಲ್ಲಿ ನೆರವಾಗಿದ್ದಾರೆ. ನಾನು ಕೂಡಾ ಈ ಕಲ್ಯಾಣ ಮಂಟಪಕ್ಕೆ ರೂ೫.೦೦ ಲಕ್ಷ ಹಣವನ್ನು ಮಂಜೂರಿ ಮಾಡಿಸಿದ್ದೇನೆ ೧೫ ದಿನದಲ್ಲಿ ಆ ಹಣ ದೇವಸ್ಥಾನ ಕಮಿಟಿಯವರ ಕೈ ಸೇರಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಅವರು ಮಾತನಾಡಿ ಮೈಲೇಶ್ವರ ಗ್ರಾಮದಲ್ಲಿ ಇಂತಹ ದೊಡ್ಡ ಕಲ್ಯಾಣ ಮಂಟಪ ನಿರ್ಮಾಣವಾಗುವದರಲ್ಲಿ ಊರಿನ ಜನರ ಶ್ರಮ ಸಾಕಷ್ಟು ಅಡಗಿದೆ ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದಾಗ ೫ ಲಕ್ಷ ಅನುದಾನವನ್ನು ನೀಡಿದ್ದೇನೆ ಅದರಂತೆ ಸಹೋದರ ಎ.ಎಸ್.ಪಾಟೀಲ(ನಡಹಳ್ಳಿ) ಅವರೂ ಕೂಡಾ ಶಾಸಕ ನಿಧಿಯಲ್ಲಿ ೫ ಲಕ್ಷ ಅನುದಾನವನ್ನು ನೀಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರು ಈಗೀನ ಶಾಸಕ ರಾಜುಗೌಡರೂ ಕೂಡಾ ಮೈಲೇಶ್ವರ ಗ್ರಾಮದ ಜನರ ಮೇಲೆ ಸಾಕಷ್ಟು ಪ್ರೀತಿಯನ್ನು ಇಟ್ಟಿದ್ದಾರೆ ಅವರೂ ಕೂಡಾ ೫೮ ಲಕ್ಷ ಅನುದಾನ ಹಾಕಿದ್ದು ಆದಷ್ಟು ಬೇಗನೇ ಕೈಸೇರಲಿದೆ ದಾನಿಗಳು ನೀಡಿದ ಹಣ ವ್ಯರ್ಥವಾಗದಂತೆ ಕಾಳಜಿ ವಹಿಸಿ ಊರಿಗೆ ಒಂದು ದೊಡ್ಡ ಗೌರವ ತರುವಂತಹ ಕಲ್ಯಾಣ ಮಂಟಪ ನಿರ್ಮಾಣದಲ್ಲಿ ಗ್ರಾಮದ ಜನರು ಯಶಶ್ವಿಯಾಗಿರುವದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಿರೂರ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಜಯಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ, ಮೈಲೇಶ್ವರ ಗ್ರಾಮದ ಜನರು ಬಸವಣ್ಣನವರ ಕಾಲದ ದೇವಸ್ಥಾನಕ್ಕೆ ಇನ್ನಷ್ಟು ಮೆರಗು ಹೆಚ್ಚಿಸುವಂತಹ ಕಾರ್ಯ ಮಾಡಿದ್ದಾರೆ ಶ್ರಾವಣ ಮಾಸದಲ್ಲಿ ಕಲ್ಯಾಣ ಮಂಟಪವನ್ನು ಉದ್ಘಾಟಿಸುವ ಮೂಲಕ ಬಸವ ಪುರಾಣವನ್ನು ಪ್ರಾರಂಬಿಸಿರುವದು ಅತ್ಯಂತ ಯೋಗ್ಯವಾದುದ್ದಾಗಿದೆ ಬಸವ ಪುರಾಣಕ್ಕೆ ಕೈಲಾಸ ಪೇಠೆಯ ಬಸವಪ್ರಭು ದೇವರನ್ನು ಆಯ್ಕೆ ಮಾಡಿ ಪುರಾಣ ಪ್ರಾರಂಬಿಸಿರುವದು ಸಂತಸ ತಂದಿದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ ಬಸವಣ್ಣನವರ ಕಾಲದ ೧೨ನೇ ಶತಮಾನದಲ್ಲಿಯೇ ಮೈಲೇಶ್ವರ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಹುಟ್ಟಿಕೊಂಡಿದೆ ಮೈಲೇಶ್ವರ ಮತ್ತು ಗುಂಡಕನಾಳ ಗ್ರಾಮಕ್ಕೆ ಅವಿನಾಭಾವ ಸಂಬAದವಿದ್ದು ಇಲ್ಲಿಯ ಜನರ ಶ್ರಮದ ಫಲದಿಂದ ದಾನಿಗಳ ನೇರವಿನಿಂದ ಕಲ್ಯಾಣ ಮಂಟಪ ನಿರ್ಮಿಸಿ ಸಾವಿರಾರು ಜನರಿಗೆ ಮಧುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಆಸರೆಯಾಗುವ ರೀತಿಯಲ್ಲಿ ನಿರ್ಮಿಸಿರುವದು ಸಂತಸವಾಗಿದೆ ಎಂದರು.
ಇನ್ನೋರ್ವ ತಾಳಿಕೋಟೆ-ಮೈಲೇಶ್ವರ-ಗುಳೇದಗುಡ್ಡ ಗಚ್ಚಿನಮಠದ ಶ್ರೀ ಕಾಶಿನಾಥ ಮಹಾ ಸ್ವಾಮಿಗಳು ಆಶಿರ್ವಚನ ವಿತ್ತರು.
ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಉದ್ಘಾಟನೆಯನ್ನು ಢವಳಗಿಯ ಪ್ರಥಮ ದರ್ಜೆ ಗುತ್ತಿಗೆದಾರ ಮನೋಹರ ಕೋರಿ ಅವರು ನೇರವೇರಿಸಿದರು.
ವೇದಿಕೆಯ ಮೇಲೆ ಮುಖಂಡ ಮಡುಸಾಹುಕಾರ ಬಿರಾದಾರ, ತಾ.ಪಂ.ಮಾಜಿ ಸದಸ್ಯ ಸೋಮನಗೌಡ ಹಾದಿಮನಿ, ಬೊಮ್ಮನಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಲ್ಲನಗೌಡ ಪಾಟೀಲ, ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ವಿನಾಯಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ ದೇಸಾಯಿ, ವಿಕಾಸ ಪಬ್ಲಿಕ್ ಶಾಲೆ ಅಧ್ಯಕ್ಷ ರಾಮಗೌಡ ಬಾಗೇವಾಡಿ, ಗ್ರಾಮದ ಮುಖಂಡರುಗಳು ಇದ್ದರು.
ಕಾಂಗ್ರೇಸ್ ಸರ್ಕಾರದ ಬಿಟ್ಟಿ ಗ್ಯಾರಂಟಿ ಯೋಜನೆಗಳಿಂದ ಎಲ್ಲ ಶಾಸಕರಿಗೆ ಅನುದಾನ ಕೊರತೆಯಾಗುತ್ತಿದೆ ಅಭಿವೃದ್ದಿ ಕಾರ್ಯಗಳು ಕೈಗೊಳ್ಳಲು ಕಷ್ಟಕರವಾಗಿದೆ ಆಡಳಿತ ಪಕ್ಷದ ಕಾಂಗ್ರೇಸ್ ಶಾಸಕರಿಗೆ ಅನುದಾನ ಸಿಗುತ್ತಿಲ್ಲಾ ಆದರೂ ಕೂಡಾ ಈ ಭಾಗದ ಜನರ ನನ್ನ ಮೇಲೆ ಸಾಕಷ್ಟು ನಿರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದು ಮೈಲೇಶ್ವರ ಗ್ರಾಮದ ಜನರ ಬೇಡಿಕೆಗಳನ್ನು ಆದಷ್ಟು ಬೇಗನೇ ಇಡೇರಿಸುತ್ತೇನೆ ಗ್ರಾಮದ ಜನರ ಜೊತೆಯಾಗಿ ನಾನು ಸದಾ ಇರುತ್ತೇನೆ.
ರಾಜುಗೌಡ ಪಾಟೀಲ(ಕು.ಸಾಲವಾಡಗಿ)
ಶಾಸಕರು ದೇವರ ಹಿಪ್ಪರಗಿ ಮತಕ್ಷೇತ್ರ.