ಎಸ್ಸಿ ಎಸ್ಟಿ ಮೀಸಲಾತಿ ಕೆನೆಪದರ: ಹೋರಾಟಕ್ಕೆ ಸಂದ ಜಯ
ಕೋಲಾರ, ಆ. ೬- ಎಸ್ಸಿ ಎಸ್ಟಿ ಮೀಸಲಾತಿಗೆ ಕೆನೆಪದರ ಅಳವಡಿಸಿ ಕೆಳಹಂತದಲ್ಲಿ ಜನರಿಗೆ ಮೀಸಲು ಸೌಲಭ್ಯ ತಲುಪಿಸಬೇಕೆಂಬ ನಮ್ಮ ಮೂರು ದಶಕಗಳ ಹೋರಾಟಕ್ಕೆ ಸುಪ್ರೀಂಕೋರ್ಟ್ ನಲ್ಲಿ ಜಯ ಸಿಕ್ಕಿದೆ ಎಂದು ಡಾ.ಚಿ.ನಾ. ರಾಮು ಹರ್ಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ನಿರ್ಣಾಯಕ ತೀರ್ಪು ನೀಡಿರುವ ಆರು ನ್ಯಾಯಮೂರ್ತಿಗಳ ಪೀಠ ಈಗಾಗಲೇ ಮೀಸಲು ಪ್ರಯೋಜನ ಪಡೆದು ಕೆನೆಪದರ ತಲುಪಿದವರಿಗೆ ಮೀಸಲಾತಿ ಅವಶ್ಯಕತೆ ಇಲ್ಲ ಎಂದು ಹೇಳಿರುವುದು ದಲಿತ ಸಮುದಾಯಗಳಲ್ಲಿರುವ ಧ್ವನಿ ಇಲ್ಲದ ವರ್ಗಕ್ಕೆ ಆಶಾಕಿರಣವಾಗಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಜಾರಿಗೆ ತರುವ ಮೂಲಕ ಕೆನೆಪದರದಲ್ಲಿರುವ ಎಸ್ಸಿ ಎಸ್ಟಿಗಳನ್ನು ಪುನರಾವರ್ತಿತ ಮೀಸಲು ಬಳಕೆಯಿಂದ ದೂರ ಇಡಬೇಕು. ಕೂಡಲೇ ಈ ವಿಚಾರದಲ್ಲಿ ಕಾರ್ಯತತ್ಪರತೆಯನ್ನು ತೋರಬೇಕು ಎಂದು ಮನವಿ ಮಾಡಿದರು
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ “ಪರಿಶಿಷ ಜಾತಿಗಳು ಮತ್ತು ಪರಿಶಿಷ ಪಂಗಡಗಳಿಂದಲೂ ಕೆನೆಪದರವನ್ನು ಗುರುತಿಸುವ ನೀತಿಯನ್ನು ವಿಕಸನಗೊಳಿಸಬೇಕು, ಆದ್ದರಿಂದ ಅವರನ್ನು ದೃಢೀಕರಣದ ಪ್ರಯೋಜನದಿಂದ ಹೊರಗಿಡಬೇಕು. ನಮ್ಮ ದೃಷ್ಟಿಯಲ್ಲಿ ಇದು ಆಗಲೇಬೇಕು ಎಂದರು.
ಇದರಿಂದ ಸಂವಿಧಾನದ ಅಡಿಯಲ್ಲಿ ಪ್ರತಿಪಾದಿಸಲ್ಪಟ್ಟ ನೈಜ ಸಮಾನತೆಯನ್ನು ಸಾಧಿಸಬಹುದು.” ಎಂದಿದೆ. ಮೀಸಲಾತಿಯ ಪ್ರಯೋಜನ ಪಡೆದಿರುವ ಎಸ್‌ಸಿ ವರ್ಗದ ವ್ಯಕ್ತಿಗಳ ಮಕ್ಕಳನ್ನು ಮೀಸಲಾತಿ ಪಡೆಯದ ವ್ಯಕ್ತಿಯ ಮಕ್ಕಳಂತೆ ಒಂದೇ ಪೀಠಕ್ಕೆ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ. ಎಸ್‌ಸಿ/ಎಸ್‌ಟಿಗಳಲ್ಲಿ ಕೆನೆಪದರಗಳನ್ನು ಗುರುತಿಸುವ ಮಾನದಂಡಗಳು ಒಬಿಸಿಗಳಿಗಿಂತ ಭಿನ್ನವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ನ್ಯಾಯಮೂರ್ತಿ ಗವಾಯಿ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದು, ಒಬಿಸಿಗಳಿಗೆ ಅನ್ವಯಿಸುವ ಕೆನೆ ಪದರದ ತತ್ವವು ಎಸ್‌ಸಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಮೊದಲ ಪೀಳಿಗೆಗೆ ಮಾತ್ರ ಮೀಸಲಾತಿಯನ್ನು ಸೀಮಿತಗೊಳಿಸಬೇಕು ಎಂದು ನ್ಯಾಯಮೂರ್ತಿ ಪಂಕಜ್ ಮಿಥಲ್ ಹೇಳಿದ್ದಾರೆ.
ಮೊದಲ ತಲೆಮಾರಿನ ಯಾವುದೇ ಸದಸ್ಯರು ಮೀಸಲಾತಿಯ ಮೂಲಕ ಉನ್ನತ ಸ್ಥಾನಮಾನವನ್ನು ತಲುಪಿದ್ದರೆ, ನಂತರ ೨ ನೇ ತಲೆಮಾರಿನವರು ಮೀಸಲಾತಿಗೆ ಅರ್ಹರಾಗಬಾರದು ಎಂದು ನ್ಯಾಯಮೂರ್ತಿ ಮಿಥಾಲ್ ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ತಿಳಿಸಿದ್ದಾರೆ.
ಕೆನೆಪದರ ನೀತಿಗೆ ಜಾರಿಗಾಗಿ ಸುಪ್ರೀಂ ಕೋರ್ಟ್ ಮುಂದೆ ಇದ್ದ ಪ್ರಕರಣಗಳಲ್ಲಿ ನಮ್ಮದು ಪ್ರಮುಖ ಪ್ರಕರಣವಾಗಿತ್ತು. ಕಳೆದ ವರ್ಷ ನಾವು ಕೆನೆಪದರ ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡಿ ಅರ್ಜಿ ಸಲ್ಲಿಸಿದ್ದೆವು. ಈ ಅರ್ಜಿಗೆ ಮಾನ್ಯತೆ ದೊರೆತು ವಿಚಾರಣೆ ನಡೆದಿತ್ತು. ಎಸ್ಸಿ ಎಸ್ಟಿ ಮೀಸಲಾತಿಗೆ ಕೆನೆಪದರ ಅಳವಡಿಸುವ ಅಗತ್ಯತೆಯನ್ನು ನಾವು ಅರ್ಜಿ ಮೂಲಕ ಹೇಳಿದ್ದೆವು. ದೇಶದ ದಲಿತ ಸಮುದಾಯಗಳೊಳಗೆ ಮೀಸಲಾತಿಯಿಂದ ಹೇಗೆ ಎರಡು ವರ್ಗಗಳು ರೂಪುಗೊಂಡಿವೆ. ಆ ವರ್ಗಗಳ ನಡುವೆ ಭೂಮಿ ಆಕಾಶದಷ ಅಂತರವಿದೆ ಎಂದಿದ್ದಾರೆ
ಅನ್ನ ಬಟ್ಟೆ ಸೂರು ಇಲ್ಲದ ಒಂದು ವರ್ಗ ಸಮಾಜದ ಕಟ್ಟಕಡೆಯಲ್ಲೇ ಉಳಿದರೆ ಮೀಸಲಾತಿ ಪ್ರಯೋಜನ ಪಡೆದು ಸಂಪತ್ತು, ಹಣ ಅಧಿಕಾರ ಪಡೆದು ಮೇರುಮಟ್ಟ ತಲುಪಿದ ಇನ್ನೊಂದು ವರ್ಗ ಹೇಗೆ ಕೆಳಮಟ್ಟದಲ್ಲಿರುವವರು ಮೇಲೆ ಬರಲು ಅಡ್ಡಿಯಾಗಿದೆ ಎಂಬುದನ್ನು ವಿಸ್ತೃತವಾಗಿ ಅಂಕಿ ಅಂಶ ಸಮೇತ ನ್ಯಾಯಾಲಯದ ಗಮನಕ್ಕೆ ತಂದಿದ್ದೆವು ಎಂದು ನೆನಪಿಸಿದ್ದಾರೆ.
ದೇಶದ ಎಸ್ಸಿ ಎಸ್ಟಿ ಮೀಸಲಾತಿ ಅದರಿಂದ ಆದ ಪರಿಣಾಮಗಳು, ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ನಾವು ಹೊರತಂದಿರುವ ’Uಟಿಣouಛಿheಜ ಂmoಟಿg ಖಿhe Uಟಿಣouಛಿhಚಿbಟes’ ಕೃತಿಯನ್ನು ಕೂಡಾ ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು. ಈಗ ನ್ಯಾಯಾಲಯ ನಮ್ಮ ಮನವಿ ಪುರಸ್ಕರಿಸಿದೆ ಎಂದು ತಿಳಿಸಿದ್ದಾರೆ.