ಹಗರಣಗಳ ತನಿಖೆಗೆ ವಿಶೇಷ ಕೋರ್ಟ್ ಸ್ಥಾಪನೆಗೆ ಒತ್ತಾಯ
ಕೋಲಾರ, ಆ.೬: ರಾಜ್ಯದಲ್ಲಿ ತಾಂಡವಾಡುತ್ತಿರುವ ಭ್ರಷ್ಟಚಾರ ಹಗರಣಗಳನ್ನು ತನಿಖೆ ಮಾಡಲು ವಿಶೇಷ ನ್ಯಾಯಾಧೀಶರ ನ್ಯಾಯಾಲಯವನ್ನು ಸ್ಥಾಪನೆ ಮಾಡಿ ಜನ ಸಾಮಾನ್ಯರ ನಂಬಿಕೆಯನ್ನು ಉಳಿಸುವಂತೆ ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ರಾಷ್ಟ್ರಪತಿರವನ್ನು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳ ಕೂಲಿಕಾರ್ಮಿಕರ ಸಮಸ್ಯೆಗಳ ಬಗ್ಗೆ ಪ್ರಗತಿಪರ ಬಂಗವಾದಿ ನಾಗರಾಜ್‌ರವರ ತೋಟದಲ್ಲಿ ಚರ್ಚೆ ಮಾಡಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಪ್ರಜೆಗಳಿಂದ “ಪ್ರಜೆಗಳಿಂದ ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ” ಚುನಾಯಿತರಾದ ಜನಪ್ರತಿನಿದಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಮರೆತು,ಸಂವಿಧಾನದ ಆಶಯಗಳಂತೆ ನಡೆದುಕೊಳ್ಳದೆ ಜನ, ರೈತ, ಕೂಲಿಕಾರ್ಮಿಕ ವಿರೋದಿ ನೀತಿಗಳನ್ನು ಅನುಸರಿಸಿ ಸಮಸ್ಯೆಗಳಿಗೆ ಸ್ಪಂದಿಸದೆಜನರ ತೆರಿಗೆ ಹಣದಲ್ಲಿ ಉಚಿತ ಮನರಂಜನೆಯನ್ನು ಪಡೆದು ರಾಜ್ಯದ ಮರ್ಯಾಧೆಯನ್ನು ರಾಷ್ಟಮಟ್ಟದಲ್ಲಿ ಹಾಳು ಮಾಡುತ್ತಿರುವ ಅನಕ್ಷರಸ್ಥ ರಾಜಕೀಯ ಪಕ್ಷಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಯಿಂದ ಒಂದು ಭಾಗ ಜನ ಸಾಮಾನ್ಯರ ಬದುಕು ಬೀದಿಗೆ ಬೀಳುತ್ತಿದ್ದರೆ ಮತ್ತೊಂದು ಭಾಗದಲ್ಲಿ ಮಳೆಯಿಲ್ಲದೆ ಜಾನುವಾರುಗಳಿಗೆ ನೀರು ಮೇವಿಲ್ಲದೆ ಪರದಾಡುವ ಜೊತೆಗೆ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿರುವ ಬೆಳೆಗಳಿಗೆ ರೋಗ ನಿಯಂತ್ರಣವಿಲ್ಲದೆ ಖಾಸಗಿ ಸಾಲಕ್ಕೆ ಸಿಲುಕಿ ಪರದಾಡುವ ಜೊತೆಗೆ ಸಾಲ ತೀರಿಸಲಾಗದೆ ರಾಜ್ಯದಲ್ಲಿ ಸಾವಿರಾರು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ರಾಜ್ಯದ ಜನರಿಗೆ ಮಾಡಿದ ರಾಜಕಾರಣಿಗಳ ಮಹಾದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಡ ಹಾಗೂ ವಾಲ್ಮಿಕಿ ನಿಗಮದ ಹಗರಣದ ಸುಳಿಯಲ್ಲಿ ಸಿಲುಕಿ ಪ್ರತಿನಿತ್ಯ ಅದೇ ಕನಸಿನಲ್ಲಿ ಕಾಲಹರಣ ಮಾಡುತ್ತಿರುವ ಆಡಳಿತ ಪಕ್ಷದ ಮುಖ್ಯಮಂತ್ರಿಗಳು ಹಗರಣವನ್ನು ತನಿಖೆ ಮಾಡಿ ಸರ್ಕಾರವನ್ನು ಉರುಳಿಸಿ ಮತ್ತೆ ಅಧಿಕಾರ ಹಿಡಿಯುವ ದುರಾಸೆಯಲ್ಲಿ ಆಡಳಿತ ವಿರೋದಿ ಎನ್.ಡಿ.ಎ ಪಕ್ಷಗಳು ಇದರ ಮದ್ಯೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ರಾಜ್ಯದ ಜನತೆ ಕಣ್ಣಿದ್ದು, ಕುರುಡರಂತೆ ಮಾತಿದ್ದು, ಮೂಕರಂತೆ ವರ್ತನೆ ಮಾಡುವ ಜೊತೆಗೆ ಯಾವ ಪಕ್ಷವೂ ರೈತರ ದಲಿತರ ಕೂಲಿಕಾರ್ಮಿಕರ ಸಮಸ್ಯೆಗಳು ಬಂದಾಗ ಆಯಾ ಜಿಲ್ಲೆಯಿಂದ ಪಾದಯಾತ್ರೆ ಮಾಡಿದಂತ ಜನರ ಸಮಸ್ಯೆಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ಮೂರು ಪಕ್ಷಗಳಿಗೆ ಪ್ರಶ್ವಿಸಿದರು.
ನಿಷ್ಠಾವಂತ ಪ್ರಮಾಣಿಕ ಅಧಿಕಾರಿಗಳಿಗೆ ಸರ್ಕಾರಗಳಲ್ಲಿ ಭದ್ರತೆ ಇಲ್ಲ ಅಕ್ಷರಸ್ಥರು ಅನಕ್ಷರಸ್ಥರ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಜನರ ಹಣವನ್ನು ನಕಲಿ ದಾಖಲೆ ಸೃಷ್ಠಿಸಿ ರಾಜಕಾರಣಿಗಳಿಗೆ ನೀಡಿ ಕಡೆಯದಾಗಿ ಮಾನ ಮಾರ್ಯದೆಗೆ ಅಂಜಿ ತನ್ನ ಜೀವವನ್ನು ಕಳೆದು ಕೊಂಡು ಕುಟುಂಬಗಳನ್ನು ಬೀದಿ ಪಾಲು ಮಾಡುವ ಜೊತೆಗೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂದೆ ಎಂಬುದು ನಿರಂತರವಾಗಿ ನಡೆಯುತ್ತಿದ್ದರೂ ಪ್ರಕರಣವನ್ನು ಗಂಬೀರ ವಾಗಿ ಪರಿಗಣಿಸದೆ ಇರುವುದು ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಗೆ ಹಿಡಿದಂತ ಕೈಗನ್ನಡಿಯಾಗಿದೆ ಎಂದು ಉದಾಹರಣೆ ನೀಡಿದರು.
ರಾಷ್ಟಪತಿಗಳು ರಾಜ್ಯದ ಹಗರಗಳು ಭ್ರಷ್ಟಚಾರವನ್ನು ತನಿಖೆ ಮಾಡಿ ಜನ ಸಾಮಾನ್ಯರು ಪ್ರಜಾ ವ್ಯವಸ್ಥೆ ಮೇಲೆ ಇಟ್ಟಿರುವ ನಂಬಿಕೆ ಉಳಿಯಬೇಕಾದರೆ ಕೂಡಲೇ ವಿಶೇಷ ನ್ಯಾಯಾದೀಶರ ನ್ಯಾಯಾಲಯವನ್ನು ಸ್ಥಾಪನೆ ಮಾಡುವ ಮುಖಾಂತರ ಪ್ರಜಾ ಗಣತಂತ್ರವನ್ನು ಉಳಿಸಬೇಕೆಂದು ಪತ್ರಿಕಾ ಹೇಳಿಕಾ ಮುಖಾಂತರ ಕೂಲಿ ಕಾರ್ಮಿಕರೊಂದಿಗೆ ಒತ್ತಾಯಿಸಿದರು.