ಸಿಯುಕೆ ಬಿ.ಎಡ್ ಹೊಸ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ
ಕಲಬುರಗಿ:ಆ.5:ಹೊಸದಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ಬಿಎಡ್ ವಿಭಾಗಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ನಡೆಯಿತು.
ಈ ಪರಿಚಯ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ನಿಕಾಯದ ಮುಖ್ಯಸ್ಥರಾದ ಪೆÇ್ರ. ಜಿ. ಆರ್. ಅಂಗಡಿ ಅವರು ಅಡಿಕೆಯ ಹೂವು (ಸಿಂಗಾರ) ಅರಳಿಸುವುದರ ಮೂಲಕ ಮತ್ತು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನೆಯ ಭಾಷಣದಲ್ಲಿ ಮಾತನಾಡಿ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಯಾರೊಬ್ಬರ ಮೇಲು ಅವಲಂಬಿತರಾಗದೆ ಸ್ವಂತ ಅಧ್ಯಯನ ಮಾಡುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಎರಡು ವರ್ಷದ ತಮ್ಮ ಅಧ್ಯಯನದಲ್ಲಿ ವಿಭಾಗಕ್ಕೆ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೆಸರನ್ನು ತರಬೇಕು ಮತ್ತು ಶಿಕ್ಷಣ ನಿಕಾಯದ ನಿರೀಕ್ಷೆಗಳನ್ನು ಈಡೇರಿಸಬೇಕೆಂದು ಹೇಳಿದರು.ಉದ್ಘಾಟನಾ ಕಾರ್ಯಕ್ರಮದ ಸ್ವಾಗತವನ್ನು ಸಹಾಯಕ ಪ್ರಾಧ್ಯಾಪಕ ಡಾ.ಪಿ. ಬಿ.ಬಾಗೇವಾಡಿ ನೆರವೇರಿಸಿದರು. ಕು. ಸ್ನೇಹ ಮತ್ತು ಬಳಗದವರು ಪ್ರಾರ್ಥಿಸಿದರು. ಕು. ದಾನಾ ಕಾರ್ಯಕ್ರಮ ನಿರ್ವಹಿಸಿದರು. ಚೇತನ್ ಹಾದಿಮನಿ ವಂದಿಸಿದರು ಪರಿಚಯ ಕಾರ್ಯಕ್ರಮದಲ್ಲಿ ಎಲ್ಲ ಹೊಸ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಪರಸ್ಪರ ಪರಿಚಯಿಸಿಕೊಂಡರು. ಎಲ್ಲಾ ಹೊಸ ವಿದ್ಯಾರ್ಥಿಗಳನ್ನು ಆರತಿ ಎತ್ತಿ ತಿಲಕ ಹಚ್ಚುವುದರ ಮೂಲಕ ವಿಭಾಗಕ್ಕೆ ಸ್ವಾಗತಿಸಲಾಯಿತು. ಎರಡು ದಿನಗಳ ಕಾಲ ನಡೆಯುವ ಈ ಪರಿಚಯ ಕಾರ್ಯಕ್ರಮದಲ್ಲಿ ಹಲವಾರು ಬೇರೆಬೇರೆ ರೀತಿಯ ಪರಿಚಯ ಗೋಷ್ಠಿಗಳು,ಪ್ರತಿಭಾ ಪ್ರದರ್ಶನ ನಡೆಯಲಿವೆ.