ಜಾನಪದ ಸಂಸ್ಕøತಿಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ
ಕಲಬುರಗಿ:ಆ.5: ಮಾನವೀಯತೆ, ಆಚಾರ-ವಿಚಾರ, ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವದು, ಹೃದಯವಂತಿಕೆ, ದೇಶಪ್ರೇಮ ಸೇರಿದಂತೆ ಮುಂತಾದ ಮಾನವೀಯ, ಸಾಮಾಜಿಕ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಹೊಂದಿರುವ ಜಾನಪದ ಸಂಸ್ಕøತಿ, ಪರಂಪರೆಯನ್ನು ಅಳವಡಿಸಿಕೊಂಡರೆ ವ್ಯಕಿತ್ವ ವಿಕಸನವಾಗಲು ಸಾಧ್ಯವಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಹೇಳಿದರು.
ನಗರದ ಗಂಜ್ ಪ್ರದೇಶದ ‘ಆಚಾರ್ಯ ಪಿಯು ಕಾಲೇಜ್’ನಲ್ಲಿ ‘ಕನ್ನಡ ಜಾನಪದ್ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ವಿಕಾಸಕ್ಕಾಗಿ ಜಾನಪದ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ಹಾಗೂ ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ದೇಶದ ಭವ್ಯ ಸಂಸ್ಕøತಿ, ಪರಂಪರೆ ಉಳಿದಿದೆ ಎಂದರೆ, ಅದು ಜಾನಪದದಿಂದ ಮಾತ್ರ ಎಂಬುದು ಮರೆಯಬಾರದು. ವಿದೇಶಿ ಸಂಸ್ಕøತಿ ಬೇಡ. ದೇಶದ ಮೂಲ ಸಂಸ್ಕøತಿಯಾದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಜಾನಪದ ಸಂಸ್ಕøತಿ ಪರಿಸರ, ನಿಸರ್ಗದೊಂದಿಗಿನ ಅವಿನಾಭಾವ ಹೊಂದಿದ್ದು, ಪ್ರಗತಿಕೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅವಧೂತ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಕಾಶಿನಾಥ ಜಿ.ಕಣಜೆ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಾಲೇಜಿನ ಉಪನ್ಯಾಸಕರಾದ ಡಾ.ಆಶಿಸ್‍ಸಿಂಗ್, ನಿವೇದಿತಾ ಹಾಹೂ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.