ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ
ಕಲಬುರಗಿ:ಆ.5:ಕ್ರೈ ಸಂಸ್ಥೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಲಬುರಗಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ಬಾಲಕಿಯರು ತಮ್ಮ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸುವ ಮಹತ್ವವನ್ನು ಅರಿಯಲು ಜಾಗೃತಿ ಅಭಿಯಾನದ” ಕುರಿತು ಅರಿವು ಮೂಡಿಸುವ ಪೋಸ್ಟರ್‍ನ್ನು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸೋಮವಾರ ಕಲಬುರಗಿ ಜಿಲ್ಲಾಧಕಾರಿಗಳ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೋಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಹಾಗೂ ಕಲಬುರಗಿ ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ವಿಠ್ಠಲ್ ಚಿಕಣಿ ಅವರು ಉಪಸ್ಥಿತರಿದ್ದರು.
ಸಮಸ್ಯೆಯ ವಿವರಣೆ: 2009 ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯು 14 ವರ್ಷದವರೆಗೆ ಮಕ್ಕಳಿಗೆ ಸಾಮಾನ್ಯ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು. ಆದರೂ ಸಹ ಹಲವಾರು ಹೆಣ್ಣು ಮಕ್ಕಳು ಇನ್ನು ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣವನ್ನು ಪಡೆಯಲು ಅಡೆ-ತಡೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗುತ್ತಿದ್ದಾರೆ. ಸಾಮಾಜಿಕ-ಆರ್ಥಿಕ ಸವಾಲುಗಳು ಸಾಂಸ್ಕøತಿಕ ಸಂಪ್ರದಾಯಗಳು, ಬಾಲ್ಯ ವಿವಾಹಗಳು ಮತ್ತು ಶಾಲೆಯಲ್ಲಿ ಶೌಚಾಲಯ ಇಲ್ಲದಿರುವ ಅವರ ಶಿಕ್ಷಣ ಯಾತ್ರೆಗೆ ಅಡ್ಡಿಪಡಿಸುತ್ತಿವೆ. ಮತ್ತು ಹೆಣ್ಣು ಮಕ್ಕಳು ತಮ್ಮ ಪ್ರೌಢ ಶಿಕ್ಷಣವನ್ನು (12ನೇ ತರಗತಿ) ಪೂರ್ಣಗೊಳಿಸಲು ಪ್ರಮುಖ ಅಡೆತಡೆಗಳನ್ನು ಒಡ್ಡುತ್ತಿವೆ. ಭದ್ರತೆ ಕುರಿತು ಚಿಂತೆಗಳು ಮತ್ತು ದೂರದ ಪ್ರಯಾಣದ ಅಂತರಗಳು ಹಾಜರಾತಿಗೆ ತಡೆಯಾಗುತ್ತಿವೆ. ಈ ಕಾರಣಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಗರ್ಭಧಾರಣೆ ಮತ್ತು ದುರ್ಬಳಕೆಗಳು ಎದುರಾಗುವ ಸಾಧ್ಯತೆ ಹೆಚ್ಚುತ್ತಿವೆ. ಯು.ಡಿ.ಐ.ಎಸ್.ಇ + 2021-22ನೇ ಅನ್ನು ವಿಶ್ಲೇಷಿಸುವುದಾದರೆ, 5 ಜನ ಹೆಣ್ಣು ಮಕ್ಕಳಲ್ಲಿ 3 ಜನ ಹೆಣ್ಣು ಮಕ್ಕಳು ಉನ್ನತ ಪ್ರೌಢ ಶಿಕ್ಷಣ ಮಟ್ಟದಲ್ಲಿ (11ನೇ ಮತ್ತು 12ನೇ ತರಗತಿಗಳು) ದಾಖಲಾತಿ ಹೊಂದುತ್ತಾರೆ.
2020ರ ರಾಷ್ಟ್ರೀಯ ಶಿಕ್ಷಣ ನೀತಿಯು 2030ರ ಸಮಾನ ಶಿಕ್ಷಣಕ್ಕಾಗಿ ಶಾಶ್ವತ ಅಭಿವೃದ್ಧಿ ಗುರಿಗಳನ್ನು ಹೊಂದುವ ಉದ್ದೇಶದೊಂದಿಗೆ 18 ವರ್ಷದವರೆಗೆ ಸಾಮಾನ್ಯ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸುವುದನ್ನು ಖಾತ್ರಿಪಡಿಸುತ್ತದೆ. ಹೆಣ್ಣು ಮಕ್ಕಳು ಉನ್ನತ ಪ್ರೌಢ ಶಿಕ್ಷಣವನ್ನು ಪಡೆಯುವುದು ಅವರ ಶಕ್ತಿಕರಣ ಮತ್ತು ದೇಶದ ಅಭಿವೃದ್ಧಿಗೆ ಅತ್ಯಂತ ಮುಖ್ಯ.
ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅಭಿಯಾನದ ಅವಶ್ಯಕತೆ: ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸಿ ಹೆಣ್ಣು ಮಕ್ಕಳ ಶಿಕ್ಷಣದತ್ತ ಸಮಾಜದ ಮನೋಭಾವವನ್ನು ಬದಲಿಸಲು, ಶಿಕ್ಷಣದಲ್ಲಿ ಲಿಂಗ ತಾರತಮ್ಯ ನೀಗಿಸಲು ಮತ್ತು ಪಾಲುದಾರರನ್ನು ತೊಡಗಿಸಲು, ಹೆಣ್ಣು ಮಕ್ಕಳನ್ನು ಶಿಕ್ಷಣದ ಮೂಲಕ ಶಕ್ತಿಮಾನಗೊಳಿಸುವ, ಬಡತನದ ಚಕ್ರವನ್ನು ಮುರಿಯಲು, ಮತ್ತು ಮಕ್ಕಳ ವಿವಾಹ, ವ್ಯಾಪಾರ, ಹಿಂಸಾಚಾರ ಮತ್ತು ಬಾಲಕಾರ್ಮಿಕತೆಯಂತಹ ಹಾನಿಕಾರಕ ಅಭ್ಯಾಸಗಳಿಂದ ಅವರನ್ನು ರಕ್ಷಿಸಲು, ಹೆಣ್ಣು ಮಕ್ಕಳಿಗೆ ಅವರ ಆರೋಗ್ಯದ ಬಗ್ಗೆ ಶಿಕ್ಷಣ ನೀಡುವುದರ ಮೂಲಕ ಆರೋಗ್ಯವನ್ನು ಸುಧಾರಿಸಲುಹಾಗೂ ಹೆಣ್ಣು ಮಕ್ಕಳನ್ನು ಶಿಕ್ಷಣದ ಮೂಲಕ ಸಮುದಾಯವನ್ನು ಸ್ವಶಕ್ತಗೊಳಿಸಲು ಇದರಿಂದ ಒಟ್ಟಾರೆ ಅಭಿವೃದ್ಧಿ ಮತ್ತು ಶಾಶ್ವತತೆ ಕಂಡುಕೊಳ್ಳಲು ಅಭಿಯಾನದ ಅವಶ್ಯಕತೆ ಇರುತ್ತದೆ.
ಅಭಿಯಾನದ ಗುರಿಗಳು ಮತ್ತು ನೀರಿಕ್ಷಿತ ಫಲಿತಾಂಶಗಳು: ಈ ಅಭಿಯಾನದ ಮೂಲಕ ಹೆಣ್ಣು ಮಕ್ಕಳ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣದಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಲು, ಸಂಬಂಧಿತ ಪಾಲುದಾರರನ್ನು ತೊಡಗಿಸುವ ಮೂಲಕ ಹೆಣ್ಣು ಮಕ್ಕಳ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ಮಾಡಲು, ಶಿಕ್ಷಕರು, ಸಮುದಾಯದ ಸದಸ್ಯರು, ಕುಟುಂಬಗಳು, ರಾಜ್ಯ ಪ್ರಾಧಿಕಾರಗಳು (ಪಂಚಾಯತ ರಾಜ್ ಸಂಸ್ಥೆಗಳು/ ಬ್ಲಾಕ್/ ಜಿಲ್ಲಾ/ರಾಜ್ಯ ಪ್ರಾಧಿಕಾರಿಗಳು ಇತ್ಯಾದಿಗಳು) ವಿದ್ಯಾರ್ಥಿಗಳು (ಶಾಲೆಗಳು/ ಕಾಲೇಜುಗಳು/ ಪ್ರಭಾವಿಗಳು/ನಿಗಮಗಳು/ಹೆಚ್.ಎನ್.ಐಗಳು/ಸಾಮಾನ್ಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಭಾರತದ ಬೆಳವಣಿಗೆಗೆ ಮತ್ತು ಶಾಶ್ವತ ಅಭಿವೃದ್ಧಿಗೆ ಪಾತ್ರರಾಗಲು ಕೋರಿದೆ.