ಶರಣಸಂಸ್ಕೃತಿ ಉತ್ಸವ – ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ  ಜಯಂತ್ಯುತ್ಸವದ ಆಹ್ವಾನ ಪತ್ರಿಕೆಬಿಡುಗಡೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಸೆ. 30 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ 2024ನೇ ಸಾಲಿನ ಶರಣಸಂಸ್ಕೃತಿ ಉತ್ಸವ ಹಾಗೂ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಜಯದೇವ ಜಗದ್ಗುರುಗಳು ಮಾಡದ ಕೆಲಸಗಳು ಇಲ್ಲ. ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿರುವವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಶ್ರೀಗಳ ಸತ್ಕಾರ್ಯಗಳನ್ನು ನಾಡಿಗೆ ತಿಳಿಸುವ ಕೆಲಸ ಮಾಡಲಾಗುವುದು. ಪೂಜ್ಯರು ಅನೇಕ ಸಂಘ ಸಂಸ್ಥೆಗಳಿಗೆ ದಾನ ಮಾಡಿರುತ್ತಾರೆ. ಅವರು ಸುತ್ತು ಕಟ್ಟು ಎಂಬ ಮಂತ್ರದಂತೆ ಕಾರ್ಯನಿರ್ವಹಿಸಿದ್ದಾರೆ. ಜಯದೇವ ಜಗದ್ಗುರುಗಳ ಕಾಲವನ್ನು ಸುವರ್ಣ ಯುಗವೆಂದು ಕರೆಯುತ್ತಾರೆ ಎಂದರು.ಅಕ್ಟೋಬರ್ 5 ರಿಂದ 13 ರವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದ ಶ್ರೀಗಳು, ಪ್ರತಿದಿನ ಬೆಳಗ್ಗೆ ಸಹಜಶಿವಯೋಗ ನಡೆಯಲಿದ್ದು, ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಡಾ. ಮರುಳಸಿದ್ದ ಸ್ವಾಮಿಗಳು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಅಕ್ಟೋಬರ್ 5 ಜಯದೇವ ಕಪ್ ಕ್ರೀಡಾಕೂಟ ಅಂಗವಾಗಿ ಮೋಟಾರ್ ಬೈಕ್ ಜಾಥಾ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ ರಾಘವೇಂದ್ರ ಜಾಥಾವನ್ನು ಉದ್ಘಾಟಿಸುವರು.ಅ. 5 ರಂದು ಬೆಳಗ್ಗೆ 10.00 ಗಂಟೆಗೆ ವಚನಕಮ್ಮಟ ಗೋಷ್ಠಿ – 1 ಅಷ್ಟಾವರಣ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಸಾಮೂಹಿಕ ವಿವಾಹ ನಡೆಯಲಿದ್ದು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಸಮ್ಮುಖ ವಹಿಸುವರು. ಮಧ್ಯಾಹ್ನ 3.00 ಗಂಟೆಗೆ ನಡೆಯುವ ವಚನ ಕಮ್ಮಟ ಪರೀಕ್ಷೆ ರ‍್ಯಾಂಕ್ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಹಿರೇಮಾಗಡಿ ಇವರು ಸಮ್ಮುಖ ವಹಿಸುವರು. ಮಧ್ಯಾಹ್ನ 4.00 ಗಂಟೆಗೆ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ಪ್ರಾರಂಭವಾಗಲಿದ್ದು, ಸಂಸದ ಗೋವಿಂದ ಎಂ.ಕಾಳಜೋಳ ಅವರು ಪಥ ಸಂಚಲನವನ್ನು ಉದ್ಘಾಟಿಸುವರು. ಸಂಜೆ 6 ಗಂಟೆಗೆ ನಡೆಯುವ ಶ್ರೀ ಜಯದೇವ ಕಪ್ ಹೊನಲು ಬೆಳಕಿನ ಕ್ರೀಡಾಕೂಟವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮತ್ತು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಸಮ್ಮುಖ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮೊದಲಾದವರು ಭಾಗವಹಿಸುವರು.ಅ. 6 ರಂದು ಬೆಳಗ್ಗೆ 10 ಗಂಟೆಗೆ ವಚನಕಮ್ಮಟ ಗೋಷ್ಠಿ-2 ಪಂಚಾಚಾರ, ಮಹಿಳಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳು ನಡೆಯಲಿವೆ. ಅ. 7ರಂದು ಬೆಳಗ್ಗೆ 10.00 ಗಂಟೆಗೆ ವಚನಕಮ್ಮಟ ಗೋಷ್ಠಿ-3 ಷಟ್‌ಸ್ಥಲ ನಡೆಯಲಿದೆ. ಸಂಜೆ 6.00 ಗಂಟೆಗೆ ಜಯದೇವ ಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮಿಗಳು, ಅಥಣಿ ಇವರು ಸಮ್ಮುಖ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು. ಮುಖ್ಯಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮುರುಳಿಧರ ಹಾಲಪ್ಪ, ಬಳ್ಳಾರಿ ಹನುಮಂತಪ್ಪ, ಡಾ. ವೈ. ರಾಮಪ್ಪ, ಉಮೇಶ ಕಾರಜೋಳ, ಎನ್.ಲೋಕೇಶ್‌ಗೌಡ, ಬಿ. ಜನಾರ್ದನಸ್ವಾಮಿ, ಜಿ.ಎಸ್. ಅನಿತ್, ಮಹಾಲಿಂಗಪ್ಪ ಕುಂಚಿಗನಾಳ್, ಡಾ. ಸಿ.ವಿ.ಹರೀಶ್ ಪಾಲ್ಗೊಳ್ಳುವರು.ಅ.೮,೯,೧೦,೧೧,೧೨ ರಂದು ವಿವಿಧ ಕಾರ್ಯಕ್ರಮ ಜರುಗಲಿವೆ.  ಅ.13 ರಂದು ಶ್ರೀಮಠದ ಆವರಣದಲ್ಲಿ ಬೆಳಗ್ಗೆ 9.30 ಗಂಟೆಗೆ ಶ್ರೀ ಮುರಿಗೆ ಶಾಂತವೀರ ಸ್ವಾಮಿಗಳವರ ಮೂರ್ತಿಯ ಶೂನ್ಯಪೀಠಾರೋಹಣ,ಬೆಳಗ್ಗೆ 11 ಗಂಟೆಗೆ ಬಸವಣ್ಣನವರ ಮತ್ತು ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ, 11.30 ಗಂಟೆಗೆ ಜಯದೇವ ಜಂಗೀ ಕುಸ್ತಿ, ಶ್ವಾನ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಸಮಾರಂಭ ನಡೆಯಲಿದ್ದು, ಡಾ.ಸಾರಂಗಧರ ದೇಶೀಕೇಂದ್ರ ಸ್ವಾಮಿಗಳು, ಶ್ರೀ ಶಿವಲಿಂಗಾನAದ ಸ್ವಾಮಿಗಳು, ಶ್ರೀ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹಂಪಿ ವಿ.ವಿ. ಕುಲಪತಿ ಡಾ. ಪರಮಶಿವಮೂರ್ತಿ, ಮಹಿಮಾ ಜೆ.ಪಟೇಲ್, ಈ ಕೃಷ್ಣಪ್ಪ, ಸಂಗಮೇಶ್ ಬಬಲೇಶ್ವರ, ಬಿ.ಆರ್. ಅಶೋಕ್‌ಕುಮಾರ್, ಮಾರಸಂದ್ರ ಮುನಿಯಪ್ಪ, ಮಹಮ್ಮದ್ ರಫಿ ಪಾಷ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.ಕೆ.ಸಿ.ನಾಗರಾಜ್, ಶ್ರೀಮತಿ ಸುನಿತಾ ಮಲ್ಲಿಕಾರ್ಜುನ್ ಮಾತನಾಡಿದರು.ಗುರುಮಠಕಲ್‌ನ ಶ್ರೀ ಶಾಂತವೀರಗುರುಮುರುಘರಾಜೇAದ್ರ ಸ್ವಾಮಿಗಳು, ಸಾಯಿಗಾವ, ಶ್ರೀ ಬಸವನಾಗಿದೇವ ಸ್ವಾಮಿಗಳು, ನಗರಸಭೆ ಸದಸ್ಯ ಕೆ.ಸಿ. ಸುರೇಶ್, ಎಸ್. ಪರಮೇಶ್, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ಡಿ.ಎಸ್. ಮಲ್ಲಿಕಾರ್ಜುನ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ವೀರಶೈವ ಸಮಾಜದ ಕರ‍್ಯದರ್ಶಿ ಪಿ. ವೀರೇಂದ್ರಕುಮಾರ್, ಶಶಿಧರಬಾಬು, ಅಂಜಿನಪ್ಪ, ಶ್ರೀಮತಿ ಲತಾ ಉಮೇಶ್, ಎಂ. ಶಂಕರಮೂರ್ತಿ ಇದ್ದರು.