ಸೊಶಿಯಲ್ ವರ್ಕರ್ ವೆಲ್‌ಫೇರ್ ಅಸೋಸಿಯೇಷನ್ ನಿಂದ ಪತ್ರ ಚಳವಳಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೩೦; ಕರ್ನಾಟಕ ರಾಜ್ಯ ಪ್ರೊಫೇಷನಲ್ ಸೊಶಿಯಲ್ ವರ್ಕರ್ ವೆಲ್‌ಫೇರ್ ಅಸೋಸಿಯೇಷನ್  ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು‌ ಒತ್ತಾಯಿಸಿ ಸರ್ಕಾರಕ್ಕೆ ಪತ್ರಚಳಚಳಿ ಮೂಲಕ ಮನವಿಮಾಡಲಾಗುತ್ತಿದೆ ಎಂದು ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ಎಂ.ಸಂತೋಷ್ ಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ ಎಂಎಸ್ ಡಬ್ಲ್ಯೂ  ಸ್ನಾತಕೋತ್ತರ ಪದವಿಯನ್ನು2 ವರ್ಷ ಅಭ್ಯಾಸ  ಮಾಡಿ ಕಾರ್ಯಕ್ಷೇತ್ರದಲ್ಲಿಯೂ ಸಮುದಾಯ ಅಭಿವೃದ್ಧಿ, ಮನೋವೈದ್ಯಕೀಯ, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ, ಆಪ್ತಸಮಾಲೋಚಕರಾಗಿ, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾಗಿ, ಕಾರ್ಖಾನೆಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾಗಿ, ಸಂಯೋಜಕರಾಗಿ, ಕಾನೂನು ಅಧಿಕಾರಿಗಳಾಗಿಯೂ `ಕೂಡ ಕರ್ತವ್ಯ ಮಾಡುತ್ತಿದ್ದೇವೆ ಆದರೆ   ಅತಿ ಕಡಿಮೆ ವೇತನವನ್ನು ತೆಗೆದುಕೊಂಡು ಸುಮಾರು 15 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಗುತ್ತಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಪಂಚಯಾತ್, ಕಾರ್ಮಿಕ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ, ಸರ್ಕಾರೇತರ ಸಂಸ್ಥೆ ಸೇರಿದಂತೆ ಇನ್ನಿತರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ನಮಗೆ ಕೆಲಸ ಖಾಯಂಗೊಳಿಸಬೇಕು ಹಾಗೂ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಸುಮಾರು ೬೦ ಸಾವಿರ ಕ್ಕೂ ಹೆಚ್ವು ನೌಕರರಿದ್ದೇವೆ.ಜೊತೆಗೆ ನಮ್ಮಗೆ ಮೀಸಲಿಟ್ಟಿರುವಂತಹ ಹುದ್ದೆಗಳಿಗೆ ಬೇರೆಯವರಿಗೆ ಅವಕಾಶ ನೀಡಲಾಗುತ್ತಿದೆ. ಇರುವ ವೇತನವನ್ನು ಬೇರೆ ಸ್ನಾತಕೋತ್ತರ ಪದವಿಧರರಿಗಿಂತಲೂ ಕಡಿಮೆ ವೇತನವನ್ನು ನಮಗೆ ನೀಡುತ್ತಿರುವುದು ಖಂಡನೀಯವಾಗಿದೆ. ಆದ್ದರಿಂದ ಸರ್ಕಾರವು ನಮ್ಮ ಮನವಿಯನ್ನು ಸ್ವೀಕರಿಸಿ ಕೂಡಲೇ ಎಲ್ಲಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರ ಸಾಮಾಜಿಕ ಕಾರ್ಯಕರ್ತ ನೌಕರರುಗಳಾದ ನಮ್ಮ ಬೇಡಿಕೆಗಳನ್ನು ಹೀಡೇರಿಸಬೇಕೆಂದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೂಡ ಈ ಪತ್ರ ಚಳವಳಿಯ ಮೂಲಕ ಮನವಿ ಮಾಡಿದರು.ರಾಜ್ಯದ ಶಿಕ್ಷಣ ಸಚಿವರು,ಆರೋಗ್ಯ ಸಚಿವರು,ಗೃಹ ಸಚಿವರಿಗೆ ನಮ್ಮ ಬೇಡಿಕೆ ಈಡೇರಿಸಲು ನಮ್ಮ ಪತ್ರ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಭಾ,ಶ್ವೇತಾ,ಸಿ.ಚಂದನ್ ಕುಮಾರ್,ರಕ್ಷಿತ್ ಗೌಡ,ಅಂಜಿನಪ್ಪ ಉಪಸ್ಥಿತರಿದ್ದರು