ಪಿಂಚಣಿಗಾಗಿ ನಿವೃತ್ತ ನೌಕರರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೩೦; ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು‌ ಎಂದು ಒತ್ತಾಯಿಸಿ ರಾಷ್ಟ್ರೀಯ ಆಂದೊನ ಸಮಿತಿ. ಇ.ಪಿ.ಎಸ್.೯೫ ನಿವೃತ್ತ ಪಿಂಚಣಿದಾರರ ಸಂಘದ ಸದಸ್ಯರು ನಗರದ ಕೆಬಿ ಬಡಾವಣೆಯಲ್ಲಿರುವ ಭವಿಷ್ಯನಿಧಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ  ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಮರುಳ‌ಸಿದ್ದಯ್ಯ ಮಾತನಾಡಿಪಿಂಚಣಿದಾರರ ನ್ಯಾಯಯುತ ಪಿಂಚಣಿ ಹಕ್ಕಿಗಾಗಿ ಹೋರಾಟವನ್ನು ಪ್ರಾರಂಭಿಸಿ ದಶಕಗಳೇ ಕಳೆದರು. ಇದೂವರೆಗೂ ಯಾವುದೇ ಬೇಡಿಕೆಗಳು ಈಡೇರಿಲ್ಲ. ಇದು ಅತ್ಯಂತ ಶೋಚನೀಯ ಸಂಗತಿ. ನಮ್ಮ ಬೇಡಿಕೆಗಳಾದ ಕನಿಷ್ಠ ಪಿಂಚಣಿ ರೂ ೭,೫೦೦ ಮತ್ತು ಡಿ.ಎ. ವೈದ್ಯಕೀಯ ಸೌಲಭ್ಯ, ವಿಧವೆಯರಿಗೆ ಪೂರ್ಣ ವೇತನ, ಪಿಂಚಣಿ ವಂಚಿತರಿಗೆ ಕನಿಷ್ಠ ಪಿಂಚಣಿ ರೂ.೫,000-00 ಬೇಡಿಕೆಗಳಿದ್ದು, ದೇಶಾದ್ಯಂತ ೧೭೦೦ ಕಂಪನಿಗಳು ಅಂದರೆ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಕಾರ್ಖಾನೆಗಳು ಇದ್ದು, ಲಕ್ಷಾಂತರ ನಿವೃತ್ತ ನೌಕರರು ತಮ್ಮ ಬದುಕಿಗಾಗಿ ಹೋರಾಟದ `ಪ್ರಯತ್ನ ನಡೆಸಿದರೂ ಸಹ ಯಶಸ್ಸು ಮಾತ್ರ ಮರೀಚಿಕೆಯಾಗಿದೆ. ದುರಾದೃಷ್ಟವೋ ಏನೋ ಅಮಾಯಕ ಜೀವಿಗಳ ಇಳಿವಯಸ್ಸಿನಲ್ಲಿ ನೆಲೆ ಕಾಣದೆ ಕಮರಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆಗೆ ಅನೇಕ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮನವಿ ಕೊಡುವುದರ ಮುಖಾಂತರ ಪ್ರತಿಭಟನೆಗಳು, ಸರದಿ ಉಪವಾಸ ಸತ್ಯಾಗ್ರಹಗಳನ್ನು ಸಹ ಮಾಡಿದ್ದೇವೆ. ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಮುಷ್ಕರ ಕೈಬಿಡುವಂತೆ ತಿಳಿಸಿಯೂ ಇದುವರೆಗೂ ಯಾವುದೇ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು. ಪ್ರಧಾನಮಂತ್ರಿಗಳಾದ  ನರೇಂದ್ರ ಮೋದಿಯವರಿಗೆ, ಕೇಂದ್ರ ಕಾರ್ಮಿಕ ಮಂತ್ರಿಗಳಾದ  ಮಂಸೂಖ್ ಮಾಂಡೋವಿಯವರಿಗೂ ಹಾಗೂ ಭವಿಷ್ಯನಿಧಿ ಮುಖ್ಯ ಆಯುಕ್ತರಿಗೂ ಮನವಿಗಳನ್ನು ಕೊಡುವುದರ ಮುಖಾಂತರ ಪ್ರತಿಭಟನೆ ಮಾಡುತ್ತಿದ್ದೇವೆ.ಆದಷ್ಟು ಬೇಗ ಕೇಂದ್ರ ಸರ್ಕಾರ ಮತ್ತು ಪಿಂಚಣಿ ಇಲಾಖೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದುಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮಂಜುನಾಥ್  ಎಂ.ಶಾಂತಪ್ಪ,  ಗಂಗಾಧರ್, ಚನ್ನಬಸಯ್ಯ,  ಮಲ್ಲಿಕಾರ್ಜುನ್ ತಂಗಡಗಿ,  ದತ್ತಪ್ಪ ಶೆಟ್ಟರ್ ಮತ್ತಿತರರಿದ್ದರು.