ಭಾರೀ ಮಳೆಗೆ ಕೊಚ್ಚಿ ಹೋದ ರೈತ
ಬಾಗಲಕೋಟೆ, ಸೆ.೩೦- ಭಾರೀ ಮಳೆಗೆ ರೈತರೊಬ್ಬರು ನೀರಿನಲ್ಲಿ ಕೊಚ್ಚಿ ಕೊಂಡು ಹೋದ ಘmನೆ ಹುನಗುಂದ ತಾಲೂಕಿನ ಮೂಗನೂರಿನಲ್ಲಿ ನಡೆದಿದೆ.
ಮಲ್ಲಪ್ಪ ಶಿವಪ್ಪ ಬಸವನಳ (೩೮) ಮೃತ ದುರ್ದೈವಿಯಾಗಿದ್ದರೆ. ಮೂಗನೂರು ಗ್ರಾಮದಿಂದ ಸ್ವಗ್ರಾಮಕ್ಕೆ ಅಂಬಲಿಕೊಪ್ಪಕ್ಕೆ ಬೈಕ್‌ನಲ್ಲಿ ತೆರೆಳುತ್ತಿದ್ದರು.
ಸೇತುವೆ ದಾಟುವಾಗ ಬೈಕ್ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಕೊಚ್ಚಿ ಹೋಗಿದ್ದರು.
ಬೈಕ್ ಸೇತುವೆ ಪಕ್ಕದಲ್ಲಿ ಪತ್ತೆ ಯಾದರೆ ಹಳ್ಳದ ಪಕ್ಕದ ಮುಳ್ಳು ಕಂಟಿಯಲ್ಲಿ ರೈತನ ಶವ ಪತ್ತೆ ಯಾಗಿದೆ. ಅಮಿನ್‌ಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.