ಡಾ.ಪಾಟೀಲ್ ನಡೆ ಖಂಡಿಸಿ 9 ರಂದು ಪ್ರತಿಭಟನೆ
ಕಲಬುರಗಿ,ಆ.5-ಸೇಡಂ ಶಾಸಕ, ರಾಯಚೂರು ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ನಡೆಯನ್ನು ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಖಂಡಿಸಿದ್ದಾರೆ.
ಡಾ.ಶರಣಪ್ರಕಾಶ ಪಾಟೀಲ ಅವರು ಮೊದಲು ಗೆಲ್ಲಿಸಿದ ಕ್ಷೇತ್ರ, ಮೂಲ ಜಿಲ್ಲೆಯ ಬಗ್ಗೆ ಯೋಚಿಸದೇ ತಾವು ಉಸ್ತುವಾರಿ ವಹಿಸಿಕೊಂಡ ಜಿಲ್ಲೆಯ ಬಗ್ಗೆ ಯೋಚಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಕಲಬುರಗಿಗೆ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ಆ. 9 ರಂದು ಶರಣ ಪ್ರಕಾಶ ಪಾಟೀಲ್ ಅವರ ಮನೆ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.