ಶ್ರಾವಣ ಸೋಮವಾರ : ಅಮರೇಶ್ವರ ಮಂದಿರದಲ್ಲಿ ಭಕ್ತ ಸಾಗರ
ಔರಾದ್ :ಆ.5: ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಯುಕ್ತ ಪಟ್ಟಣದ ಉದ್ಭವಲಿಂಗ ಅಮರೇಶ್ವರ ಮಂದಿರದಲ್ಲಿ ಬೆಳಿಗ್ಗೆ ಭಕ್ತ ದಂಡು ಹರಿದು ಬರುತ್ತಿದೆ.
ನಸುಕಿನ ಜಾವದಿಂದಲೇ ಭಕ್ತರು ದೇಗುಲಕ್ಕೆ ತೆರಳಿ ಲಿಂಗಕ್ಕೆ ಹಾಲಿನ ಅಭಿಷೇಕ, ಬಿಲ್ವ ಪತ್ರಿ ಅರ್ಪಿಸಿದರು. ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.