ಗಿಡಮೂಲಿಕೆಗಳಲ್ಲಿದೆ ಅಡ್ಡಪರಿಣಾಮವಿಲ್ಲದ ರೋಗ ನಿವಾರಣಾ ಶಕ್ತಿ
ಕಲಬುರಗಿ:ಆ.5: ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಖುಷಿ-ಮುನಿಗಳು, ಪೂರ್ವಜರು ಗಿಡಮೂಲಿಕೆಗಳನ್ನು ಬಳಸಿ ಯಾವುದೇ ರೋಗ ಬಂದರೆ ಅದಕ್ಕೆ ವಾಸಿ ಮಾಡಿಕೊಳ್ಳುತ್ತಿದ್ದರು ಮತ್ತು ಮುಂಜಾಗ್ರತೆ ಕ್ರಮವಾಗಿ ಅವುಗಳನ್ನು ಬಳಸುತ್ತಿದ್ದರು. ಇಂದಿಗೂ ಕೂಡಾ ಗಿಡಮೂಲಿಕೆಗಳನ್ನು ಬಳಿಸಿದರೆ ಅನೇಕ ಕಾಯಿಲೆಗಳು ವಾಸಿಯಾಗುತ್ತದೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂದು ಪ್ರಸಿದ್ಧ ನಾಟಿ ವೈದ್ಯ, ಕಾಮಣಿ ಔಷಧ ವಿತರಕ ರಾಜಕುಮಾರ ಎಂ.ಭಜಂತ್ರಿ ಹೇಳಿದರು.
ನಗರದ ಶಹಾಬಜಾರ ನಾಕಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಕಾಲೇಜಿನ ಹತ್ತಿರವಿರುವ ‘ಮದಗುಣಕಿ ಸುಪ್ರಸಿದ್ಧ ಕಾಮಣಿ ಔಷಧ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ರಾಷ್ಟ್ರೀಯ ಗಿಡಮೂಲಿಕೆಗಳ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಸರ್ವ ಕಾಯಿಲೆಗಳಿಗೂ ಗಿಡಮೂಲಿಕೆಗಳಲ್ಲಿ ಮದ್ದಿದೆ. ಬಹಳಷ್ಟು ಜನರಿಗೆ ಅದರ ಬಗ್ಗೆ ಗೊತ್ತಿರುವುದಿಲ್ಲ ಮತ್ತು ತಾಳ್ಮೆಯಿಲ್ಲ. ತಕ್ಷಣ ಕಾಯಿಲೆ ವಾಸಿಯಾಗಬೇಕು ಎಂದು ಪಾಶ್ಚಿಮಾತ್ಯ ವೈದ್ಯ ಪದ್ಧತಿಗೆ ಮೊರಹೋಗಲಾಗಿದೆ. ಕಾಮಣಿಗೆ ನಮ್ಮ ಅಜ್ಜನಿಂದ ಔಷಧಿ ನೀಡುವುದು ಪ್ರಾರಂಭವಾಗಿದ್ದು, ಈಗ ಮೂರನೇ ತಲೆಮಾರಿನವನಾದ ನಾನು ಕೂಡಾ ವಿತರಣೆ ಮಾಡುತ್ತಿದ್ದೇನೆ. ನಮ್ಮಲ್ಲಿ ಔಷಧಿ ಪಡೆದು ಸಾವಿರಾರು ಜನರು ಕಾಮಣಿ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಪ್ರತಿ ಬುಧವಾರ ಮತ್ತು ಭಾನುವಾರ ಆಳಂದ ತಾಲೂಕಿನ ಮದಗುಣಕಿ ಹಾಗೂ ದಿನಾಲು ಬೆಳೆಗ್ಗೆ 6ರಿಂದ 11 ಗಂಟೆಗೆ ಕಲಬುರಗಿ ನಗರದ ಶಹಾಬಜಾರ ನಾಕಾದ ಖರ್ಗೆ ಕಾಲೇಜು ಹತ್ತಿರವಿರುವ ಔಷಧ ವಿತರಣೆ ಕೇಂದ್ರದಲ್ಲಿ ಔಷಧಿಯನ್ನು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಪ್ರಮುಖರಾದ ವಿನೋದ ಪೋತ್ದಾರ್ ಅಶೋಕ ಗುಪ್ತಾ, ಧೂಳಪ್ಪ ಪರೀಟ್ ಸೇರಿದಂತೆ ಇನ್ನಿತರರಿದ್ದರು.