ರಸ್ತೆ ಕೆಳಗಿಳಿದ ಬಸ್ ತಪ್ಪಿದ ಅನಾಹುತ
ಔರಾದ್ :ಆ.5: ಬೀದರನಿಂದ ಔರಾದ್ ತಾಲೂಕಿನ ಕರಂಜಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬಸ್ಸೊಂದು ಕಿರಿದಾದ ರಸ್ತೆಯ ವೈಫಲ್ಯದಿಂದ ರಸ್ತೆಬಿಟ್ಟು ಕೆಳಗೆ ಇಳಿದ ಘಟನೆ ವಡಗಾಂವ (ದೇ)-ಬೇಲೂರ್ ಗ್ರಾಮದ ಬಳಿ ನಡೆದಿದೆ.
ಸಾಯಂಕಾಲ ಆಗಿರುವ ಕಾರಣದಿಂದ ಹೆಚ್ಚಿನವರು ಕರ್ತವ್ಯದಿಂದ ತೆರಳುವವರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದರು. ಎದುರಿನಿಂದ ಕ್ರೂಸರ್ ಬಂದಿರುವ ಕಾರಣ ಹಾಗೂ ಮಳೆಯಿಂದ ಟೈರ್ ಗಳು ಹಸಿಯಾದ ಕಾರಣ ರಸ್ತೆ ಕೆಳಗೆ ಇಳಿದಿದೆ. ಅಲ್ಲದೇ ರಸ್ತೆಯೂ ಕಿರಿದಾಗಿದೆ ಎಂದು ಚಾಲಕ ಎಡಿಸನ್ ತಿಳಿಸಿದ್ದಾರೆ.
ಬಸ್ ನಲ್ಲಿ ಸುಮಾರು 32 ಜನ ಪ್ರಯಾಣಿಸುತ್ತಿದ್ದರು. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಬೀದರ ಘಟಕ 1ರ ವ್ಯವಸ್ಥಾಪಕರು ತಿಳಿಸಿದ್ದಾರೆ. ಬಸ್ ರಸ್ತೆಯ ಕೆಳಗೆ ಇಳಿಯುತ್ತಿದಂತೆ ಚಾಲಕ -ನಿರ್ವಾಹಕ ಬಸ್ ನಲ್ಲಿರುವ ಎಲ್ಲ ಪ್ರಯಾಣಿಕರಿಗೆ ಕೆಳಗಿಸಿದರು. ನಂತರ ಬಸ್ ರಸ್ತೆಯ ಮೇಲೆ ತೆಗೆದು ಪ್ರಯಾಣಿಕರಿಗೆ ಸುರಕ್ಷಿತವಾಗಿ ಗ್ರಾಮಗಳಿಗೆ ತಲುಪಿಸಿದರು.
ಜನರ ಆಕ್ರೋಶ :
ಬೀದರ ಘಟಕದಿಂದ ಔರಾದ್ ತಾಲೂಕಿನಲ್ಲಿ ಸಂಚರಿಸುವ ಬಹುತೇಕ ಬಸ್ ಗಳು ಗುಜರಿ ಹಾಕುವ ಬಸ್ ಗಳಾಗಿವೆ. ಆದ್ದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಕುಡಲೇ ಇಲಾಖೆ ಎಚ್ಚತ್ತುಕೊಂಡ ಹೊಸ ಹಾಗೂ ಗುಣಮಟ್ಟದ ಬಸಗಳು ಓಡಿಸಬೇಕು ಎಂದು ವಡಗಾಂವ ಗ್ರಾಮಸ್ಥರು ಆಗ್ರಹಿಸಿದ್ದಾರೆ.