ಕ್ರೀಡೆಯಲ್ಲಿ ಭಾಗವಹಿಸುವದರಿಂದ ಒಳ್ಳೆಯ ಆರೋಗ್ಯ ಲಭಿಸುತ್ತದೆ :ನಾಯಕಲ್ ಮಠ
ಕೊಲ್ಹಾರ:ಆ.5:ಮಕ್ಕಳು ಅಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಒಳ್ಳೆಯ ಆರೋಗ್ಯ ಸಿಗುತ್ತದೆ ಎಂದು ತಹಸೀಲ್ದಾರ ಎಸ್. ಎಸ್. ನಾಯಕಲ್ ಮಠ ಹೇಳಿದರು.
ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ವಿದ್ಯಾಭಾರತಿ ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸಲು ಮಕ್ಕಳು ಹೆಚ್ಚು ಸಮಯವನ್ನು ವಿದ್ಯಾಭ್ಯಾಸದ ಕಡೆಗೆ ಕೊಡುತ್ತಿದ್ದಾರೆ. ಆದರೆ ಒಳ್ಳೆಯ ಆರೋಗ್ಯವಿದ್ದರೆ ಮಾತ್ರ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯ. ಒಳ್ಳೆಯ ಆರೋಗ್ಯ ಸಿಗಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದರು.
ಇವತ್ತು ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ.ಕ್ರೀಡಾ ಉಪಕರಣಗಳು ಹಿಂದಿನಕ್ಕಿಂತ ಈಗ ಆಧುನಿಕ ಸಲಕರಣೆಗಳು ಬಂದಿವೆ ಅವುಗಳನ್ನು ಬಳಸಿಕೊಂಡು ಒಳ್ಳೆಯ ಆಟಗಳನ್ನು ಆಡಿ, ಆದರೆ ಕ್ರಿಕೆಟ್ ಒಂದೇ ಆಟವಿಲ್ಲ ಇನ್ನೂ ಹಲವು ದೇಶೀಯ ಆಟಗಳಿವೆ ಅವುಗಳಲ್ಲಿ ಭಾಗವಹಿಸಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ನಿರ್ದೇಶಕ ಟಿ. ಟಿ. ಹಗೇದಾಳ ಮಾತನಾಡಿ,ವಿದ್ಯಾರ್ಥಿಗಳ ಬೆಳವಣಿಗೆಗೆ ಕ್ರೀಡೆ ಬಹಳಷ್ಟು ಸಹಕಾರಿಯಾಗಿದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಯನ್ನು ಮರೆತು ತಂದೆ ತಾಯಿಗಳು, ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಸಮಯವನ್ನು ಕೊಡುತ್ತಿದ್ದಾರೆ ಇದರಿಂದ ಅವರ ದೇಹದ ಬೆಳವಣಿಗೆಯು ಕುಂಠಿತವಾಗುತ್ತಿದೆ.ಇವತ್ತು ವಿದ್ಯಾರ್ಥಿಗಳು ದೈಹಿಕವಾಗಿ,ಮಾನಸಿಕವಾಗಿ ಸದೃಢರಾಗಬೇಕಾದರೆ ಅವರಿಗೆ ಕ್ರೀಡೆಗಳು ಬಹಳ ಮುಖ್ಯವಾಗಿವೆ ಎಂದರು.
ಈ ವೇಳೆ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ. ಯು. ಗಿಡ್ಡಪ್ಪಗೋಳ ಕ್ರೀಡಾಧ್ವಜಾರೋಹಣ ನೆರವೇರಿಸಿದರು. ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್. ಎಸ್. ಅವಟಿ ಕ್ರೀಡಾ ಜ್ಯೋತಿ ಬೆಳಗಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕವಟಗಿ, ಅಧ್ಯಕ್ಷತೆ ವಹಿಸಿದ ವಿದ್ಯಾಭಾರತಿ ಕರ್ನಾಟಕ ವಿಜಯಪುರ ಜಿಲ್ಲಾಧ್ಯಕ್ಷ ಪ್ರಭು ಕಡಿ ಮಾತನಾಡಿದರು.ಈ ವೇಳೆ ಕ್ರೀಡಾಕೂಟಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್. ಬಿ. ಪತಂಗಿ,ನಿರ್ದೇಶಕರಾದ ಎನ್. ಕೆ. ಮೇಲಗಿರಿ, ವ್ಹಿ . ಎಸ್. ದೇಸಾಯಿ,ಎಸ್.ಸಿ. ಕುಂಬಾರ, ಎಸ್. ಜಿ. ಗಿಡ್ಡಪ್ಪಗೋಳ,ಸಿ. ಎಸ್. ಗಿಡ್ಡಪ್ಪಗೋಳ, ಟಿ. ಟಿ. ಹಗೇದಾಳ,ಎಸ್. ಎಂ. ಶೀಲವಂತ, ಮುಖ್ಯ ಶಿಕ್ಷಕ ಆರ್. ಕೆ. ಉಮರಾಣಿ,ಜಿಲ್ಲಾ ಕಾರ್ಯದರ್ಶಿ ರಾಜಶೇಖರ ಪಾಟೀಲ,ಕ್ರೀಡಾಭಾರತಿ ಸಂಯೋಜಕ ಅಶೋಕ ಕೊಡಗಾನೂರ, ಮುಖ್ಯ ಶಿಕ್ಷಕ ವೈ. ಜಿ. ಶಿರೋಳ, ಶಾರೀರಿಕ ಪ್ರಮುಖ ಎಸ್. ಎಸ್. ಗೌಡರ, ಜಿಲ್ಲಾ ಕ್ರೀಡಾ ಪ್ರಮುಖ ಮಲ್ಲಿಕಾರ್ಜುನ ಕುಬಕಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕಿ ಸಿ. ಎಚ್. ಗೌಡರ ಸ್ವಾಗತಿಸಿದರು. ಶಿಕ್ಷಕರಾದ ಮಂಜುನಾಥ ಮುಳವಾಡ ನಿರೂಪಿಸಿದರೆ,ಗಿರೀಶ ಕುಲಕರ್ಣಿ ದಾನಿಗಳ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.