ಸ್ಪರ್ಧಾತ್ಮಕ ಯುಗದಲ್ಲಿ ಸಂಶೋಧನೆ ತನ್ನದೇಯಾದ ಮೌಲ್ಯವನ್ನು ಹೊಂದಿದೆ: ಡಿಸಿ
ವಿಜಯಪುರ,ಆ.5: ಸ್ಪರ್ಧಾತ್ಮಕ ಯುಗವಾದ ಇಂದಿನ ದಿನಗಳಲ್ಲಿ ಸಂಶೋಧನೆ ತನ್ನದೆಯಾದ ಮೌಲ್ಯವನ್ನು ಹೊಂದಿದೆ. ಇಂದಿನ ವಿದ್ಯಾರ್ಥಿಗಳು ಸಂಶೋಧನಾ ಮನೋಭಾವದೊಂದಿಗೆ ಹೊಸತನವನ್ನು ಸಾಧಿಸುವ ಸಾಧಕರಾಗಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಕರೆ ನೀಡಿದರು.
ನಗರದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಂಜುಮನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರ ಕಲಾ ಸಂಶೋಧನಾ ಮತ್ತು ಕೌಶಲ್ಯ ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ “ಇನ್ನೋವೇಟೀವ್ ರಿಸರ್ಚ ಇನ್ ಹ್ಯೂಮಾನಿಟೀಸ್, ಕಾಮರ್ಸ, ಸೈನ್ಸ್ ಐಂಡ್ ಟೆಕ್ನೋಲಾಜಿ” ಎಂಬ ವಿಷಯದ ಮೇಲೆ ಜರುಗಿದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಚಾರ ಸಂಕಿರಣದ ಮಹಾಪೋಷಕರು ಹಾಗೂ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಸೈಯ್ಯದ ಮಹಮೂದಪೀರಾ ಪೀರಜಾದೆ, ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ ಜೈನುಲಾಬೇದಿನ್ ಪೀರಜಾದೆ, ಅಂಜುಮನ ಪದವಿ ಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ಇಮ್ತಿಯಾಜ್ ಖಾದ್ರಿ ಮುಷ್ರೀಫ್ ಹಾಗೂ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಹಮೀದ ಅಥಣಿ ಭಾಗವಹಿಸಿ ಮಾತನಾಡಿದರು.
ಅಂತರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ದಿಕ್ಸೂಚಿ ಭಾಷಣಕಾರಾಗಿ ಆಗಮಿಸಿದ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿಯ ಡೀನ್ ಪ್ರೊ. ಜಿ.ಆರ್. ಅಂಗಡಿ “ಇನ್ನೋವೇಟೀವ್ ರಿಸರ್ಚ ಇನ್ ಹ್ಯೂಮಾನಿಟೀಸ್” ಎಂಬ ವಿಷಯದ ಕುರಿತು ಮಾತನಾಡಿದರು. ಬೆಂಗಳೂರಿನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸಾಯಿನ್ಸ್‍ನ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ. ರವೀಂದ್ರನಾಥ ಆಲದಕಟ್ಟಿ ಅವರು “ಇನ್‍ಸಾಯಿಟ್ಸ್ ಇಂಟೂ ಪೋಟ್ಯಾನ್ಶಿಯಲ್ ಅಕ್ಟೀವಿಟೀಸ್ ಆಫ್ ನಿಂಬಲೈಡ್ಸ್ ನೀಮ್ ಕಾಸ್ಟ್ಯೂವೇಂಟ್ ಪ್ರೋಮಿಸಿಂಗ್ ಕ್ಯಾಂಡಿಡೇಟ್ ಫಾರ್ ದ ನೋವೇಲ್ ಮೇಲ್ ಕಾಂಟ್ರಾಸೇಪ್ಟೀವ್ ಅಪ್ರೋಚಸ್” ಎಂಬ ವಿಷಯದ ಕುರಿತು ಮಾತನಾಡಿದರು.
ಸೌದಿ ಅರೇಬಿಯಾದ ಕಿಂಗ್ ಫೈಸಲ್ ವಿಶ್ವವಿದ್ಯಾಲಯ ಡಾ. ಮಂಜೂರ ಕೊಲ್ಹಾರ ಹಾಗೂ ಕಿಂಗ್ ಸೌದ ವಿಶ್ವವಿದ್ಯಾಲಯದ ಡಾ. ಮುಖ್ತಾರ ಅಹ್ಮದ ಅವರು ಸಂಶೋಧನಾ ಕ್ಷೇತ್ರದಲ್ಲಿ ಎ.ಆಯ್. ತಂತ್ರಜ್ಞಾನದ ಕುರಿತು ಮಾತನಾಡಿದರು. ಈ ಅಂತರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಸಹಯೋಗತ್ವ ನೀಡಿದ ಕಲಾ ಸಂಸ್ಥೆಯ ಅಧ್ಯಕ್ಷ ಡಾ. ಲಾಹೋರಿ ಹಾಗೂ ನಿರ್ದೇಶಕ ಡಾ. ಶೀರಾಜೋದ್ದೀನ್ ಹೊರಗಿನಮನಿ ಉಪಸ್ತಿತರಿದ್ದರು.
ಸುಮಾರು 200ಕ್ಕೂ ಅದೀಕ ಸಂಶೋಧನಾರ್ಥಿಗಳು ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದರು. ವಿಚಾರ ಸಂಕಿರuದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎಮ್.ಜಿ. ಘೋಡೆಸವಾರ ಮಾತನಾಡಿದರು.
ಡಾ. ಸಲೀಮ್ ದೇಸಾಯಿ ಸ್ವಾಗತಿಸಿದರು, ಡಾ. ಎಸ್.ಜೆ. ಜಹಾಗೀರದಾರ ವಂದಿಸಿದರು.