ಮುಖ್ಯಗುರುಗಳ ಸೇವಾ ವಯೋನಿವೃತ್ತಿ
ಗುರುಮಠಕಲ್:ಆ.5:ತಾಲೂಕಿನ ಸಮಿಪದ ಚಂಡರಕಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಡೆಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರಾಜಶೇಖರ ಸ್ವಾಮಿ ಮುಖ್ಯಗುರುಗಳ ಸೇವಾ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು.ಹೂವು ಹುಟ್ಟುವಾಗ ಪರಿಮಳದಿಂದ ಇರುತ್ತದೆ ಆಹೂವಿನಲ್ಲಿರು ಸುಗಂದವನ್ನು ಹೀರುವ ಸಲುವಾಗಿ ದುಂಬಿಗಳು ಯಾವ ರೀತಿಯಾಗಿ ಹೊಡೊಡಿ ಬರುತ್ತವೆಯೋ ಆದೆ ರೀತಿಯಾಗಿ ಅಕ್ಷರದ ನುಡಿಗಳನ್ನು ವಜ್ರಗಳಹಾಗೆ ಮಕ್ಕಳಿಗೆ ಭೋಧಿಸಿ ಶಾರದ ಮಾತೆಯ ಜ್ಞಾನ ದೇವಾಲಯದಲ್ಲಿ ಮುಖ್ಯಗುರುಗಳಾಗಿ ಈ ವತ್ತಿನ ದಿನ ಸೇವಾ ವಯೋ ನಿವೃತ್ತಿ ಹೊಂದುವಂತಹ ಶ್ರೀ ರಾಜಶೇಖರ ಸ್ವಾಮಿ ಮುಖ್ಯಗುರುಗಳು ಚಂಡರಿಕಿ ಯವರ ಕುಟುಂಬದವರಿಗೆ ಒಂದೇ ಮಾತಿನಲ್ಲಿ ಹೇಳ ಬೇಕಾದರೆ ಗುಡಿಯಲ್ಲಿರುವ ಕಲ್ಲಿನ ದೇವರು ಕರೆದರು ಕೂಡ ಮಾತನಾಡಿಸುವದಿಲ್ಲ ಆದರೆ ಮಕ್ಕಳಿಗೆ ಶಾಲೆಯಲ್ಲಿದ್ದು ಅಕ್ಷರ ಅಭ್ಯಾಸವನ್ನು ಕಲಿಸುವ ಶಾಲೆಯ ಶಿಕ್ಷಕರು ಬಹಾಳ ದೊಡ್ಡವರು ಎಂದು ಮಲ್ಲಿಕಾರ್ಜುನ ಆನೂರು ಚಂಡರಕಿ ಹೇಳಿದರು, ರಾಜ್ಯ ಸರಕಾರ ನೌಕರ ಸಂಘದ ತಾಲೂಕ ಅಧ್ಯಕ್ಷರಾದ ಸಂತೋಷಕುಮಾರ ನೀರೆಟಿ ಮಾತನಾಡುತ್ತ ಮುಖ್ಯಗುರುಗಳು ಒಂದನೇಯ ತರಗತಿಯಿಂದ ಮೂರನೆಯ ತರಗತಿಯವರೆಗೆ ಇದೆ ಶಾಲೆಯಲ್ಲಿ ಕಲಿತು ಮತ್ತು ಅದೆ ಶಾಲೆಯಲ್ಲಿಯೇ ನಿವೃತ್ತಿ ಯಾಗೂವುದು ಬಹಳಾ ಸಂತೋಷದ ವಿಷಯ ನಲವತ್ತು ವರ್ಷಗಳ ಕಾಲ ಸೇವೆ ಮಾಡಿದ್ದಾರೆ ಹಾಗೂ ಇವರ ಕುಟುಂಬದ ಎಲ್ಲಾರು ಉತ್ತಮವಾದ ಶಿಕ್ಷಣ ಪಡೆದು ಎಲ್ಲಾರು ಉತ್ತಮ ಸರಕಾರದ ಸೇವೆಯಲ್ಲಿಯೆ ಇದ್ದಾರೆ ಎಂದರು. ಸಿ ಆರ್ ಪಿ ಸ?ಯದ್ ಬಾಬಾ ಅವರು ಮುಖ್ಯಗುರುಗಳ ಸಂಪೂರ್ಣ ಜೀವಿತ ಚರಿತ್ರೆಯನ್ನು ಓದಿದರು, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ನಾರಾಣರೆಡ್ಡಿ ಪೆÇೀ.ಪಾಟೀಲ್ ಹಾಗೂ ಮುಖ್ಯಗುರುಗಳ ಮಗ ವಿನಯಸ್ವಾಮಿ ಮಾತನಾಡಿ ನಮ್ಮ ತಾಯಿ ತಂದೆಯವರು ಇಬ್ಬರು ಶಾಲ ಶಿಕ್ಷಕರು ಇದ್ದು ನಮಗೆ ಉತ್ತಮವಾದ ಸಂಸ್ಕಾರ ಕೊಟ್ಟಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಬಾಗಿಯಾದ ಸರ್ವರಿಗೂ ರುದಯ ಪೂರ್ವಕ ಧನ್ಯವಾದಗಳು ಹೇಳಿದರು. ಸೇವಾ ವಯೋ ನಿವೃತ್ತಿ ಹೊಂದಿದ ಶ್ರೀ ರಾಜಶೇಖರ ಮುಖ್ಯಗುರುಗಳು ಮಾತನಾಡಿ ಮಡೆಪಲ್ಲಿ ಗ್ರಾಮದ ಸಾರ್ಜನಿಕರು ತುಂಬ ಸಂತೋಷದಿಂದ ನನ್ನನ್ನು ಭಕ್ತಿ ಪೂಜ್ಯ ಭಾವದಿಂದ ನೋಡಿಕೊಂಡರು ಅವರಿಗೆ ಭಗವಂತನು ಸುಖವಾಗಿಡಲಿ ಎಂದು ಆರ್ಶಿವಚನ ನೀಡಿದರು. ಈವೇಳೆ ಡಿ ಡಿ ಪಿಐ ಯಾದಗಿರಿ ಹಣಮಂತು ಹಂದರಿಕಿ, ಗ್ರಾಪಂ ಅಧ್ಯಕ್ಷರು ದೇವಮ್ಮಬಸಣ್ಣ ಜೋಗು, ಉಪಾಧ್ಯಕ್ಷರು ಭೀಮಮ್ಮ ಚನ್ನಪ್ಪ ಮಡೆಪಲ್ಲಿ, ಎಸ್ ಡಿ ಎಂ ಸಿ ಅಧ್ಯಕ್ಷರು ಕಿಷ್ಟಪ್ಪ, ಶಾಲಾ ಭೊ ದಾನಿಗಳು ಅನಂತರೆಡ್ಡಿ ಕೊತ್ತಕಾಪು. ಹಾಗೂ ಗ್ರಾಪಂ ಸರ್ವಸಧಸ್ಯರು, ಶಿಕ್ಷಣಪ್ರೇಮಿಗಳು,ಶಾಲಾ ಮುಖ್ಯೂಪಾಧ್ಯಯರುಇದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಗುರುಗಳು ತಿರುಪತಯ್ಯ ನವರು ವಹಿಸಿ ಕೊಂಡಿದ್ದರು, ವಿಧ್ಯರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.