ನಿಮ್ಮ ಗ್ರಾಮಗಳಲ್ಲಿಯು ಮಾಡುವ ನಿಸ್ವಾರ್ಥಸೇವೆಯು ಕೂಡ ದೇಶ ಸೇವೆ :ಡಾ. ಜೋಷಿ
ಗುರುಮಠಕಲ್:ಆ.5: ಗಡಿಕಾಯುವ ಯೋದರು ಇರುವುದರಿಂದ ದೇಶವು ಸುಭದ್ರವಾಗಿದ್ದು ಅದರಂತೆ ರಾಷ್ಷ್ರೀಯ ಯೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೆಲ್ಲಾರು ನಿಮ್ಮ ಗ್ರಾಮಗಳ ಅಭ್ಯುದಯಕ್ಕೆ ಮಾಡುವಂತಹ ನಿಸ್ವಾರ್ಥ ಸೇವೆಯೂ ಕೂಡ ದೇಶ ಸೇವೆಯಾಗುತ್ತದೆ ಎಂದು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ತರು ಡಾ. ಪುರುಷೋತ್ತಮ ಜೋಷಿ ಅಭಿಪ್ರಾಯಪಟ್ಟರು. ತಾಲೂಕಿನ ಕಂದಕೂರ ಗ್ರಾಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಕೆ, ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. 1969 ರಂದು ಮಹಾತ್ಮ ಗಾಂದಿಜಿಯವರ ಜನ್ಮಶತಮಾನೋತ್ಸವ ವರ್ಷ ಡಾ. ಎಸ್. ರಾದಕೃಷ್ಣನ್ ಅವರ ಅಧ್ಯಕ್ಷತೆಯ ಸಮಿತಿ ಶಿಕ್ಷಣದ ಜೋತೆಗೆ ಸಮಾಜ ಮುಖಿ ಕಾರ್ಯಗಳ ಅವಶ್ಯಕತೆ ಮನಗಂಡು ರಾಷ್ಟ್ರೀಯ ಸೇವಾಯೋಜನೆಯನ್ನು ಆರಂಭಿಸಿತು. ಸದ್ಯ ವಾರ್ಷಿಕ ರೂ 16 ಕೋಟಿ ಅನುದಾನವನ್ನು ದೇಶಾದ್ತಾಂತ ಎನ್ ಎಸ್ ಎಸ್ ಬಳಸಲಾಗುತ್ತಿದೆ ಎಂದು ತಿಳಿಸಿದರು. ಉಪನ್ಯಾಸಕ ರಾಯಪ್ಪ ಡೋಣಗಾಂವ ಮಾತನಾಡಿದರು.ರಾಷ್ಟ್ಟೀಯ ಸೇವಾ ಶಿಬಿರದ ಯೋಜನೆಗಳು ರಕ್ತದಾನದ ಮಹತ್ವದ ಬಗ್ಗೆ ತಿಳಿಸುವುದು, ಗ್ರಾಮೀಣ ಜನರಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವುದು, ನೆಲ ಜಲ ಸಂರಕ್ಷಣೆ ಹಾಗೂ ಅದರ ಸಧ್ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಮುಖ್ಯವಾಗಿ ಬಾಲ್ಯವಿವಾಹದ ಬಗ್ಗೆ ಅರಿವು ಮೂಡಿಸುವುದು,.ನಾನಲ್ಲ ನೀನು ಅನ್ನುವ ಭಾವನೆ ಬರಬೇಕು ನಾನು ನನ್ನ ದೇಶಕ್ಕಾಗಿ ಸಮರ್ಪಣಾ ಭಾವದಿಂದ ದುಡಿದು ಅದರ ಸ್ವಾತಂತ್ರ್ಯ ಮತ್ತು ಐಕ್ಯತೆಯನ್ನು ಬಲಗೊಳಿಸುತ್ತೆನೆ ಎಂದು ತಾವೆಲ್ಲಾರು ಪ್ರತಿಜ್ಞೆಯನ್ನು ನಿಮ್ಮಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು ,.ನಿವೆಲ್ಲಾರು ಬೇರೆ ಗ್ರಾಮಗಳಿಂದ ಬಂದರು ಕೂಡ ಸಹೋದರ ಸಹೋದರಿಯರ ಹಾಗೆ ಕೂಡಿ ಏಳು ದಿನ ಕಾರ್ಯಕ್ರಮದಲ್ಲಿ ಇದ್ದು ನಿಮ್ಮಲ್ಲಿ ನಾಯಕತ್ವದ ಗುಣ ಬೆಳೆಸಿಕೊಂಡು ನಿಮ್ಮ ಗ್ರಾಮಗಳ ಸ್ವಚ್ಚತೆಯ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿ ಕೊಂಡರೆ ದೇಶಸೇವೇ ಮಾಡಿದಹಾಗೇಯೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಚಿನ್ಹೆಯ ಬಗ್ಗೆ ಹಾಗೂ ವಿವರಣೆನ್ನು ನೀಡುತ್ತ ಬ್ರಹ್ಮಾಂಡ ದೊಳಗೆ ನಮ್ಮ ಪಾತ್ರ ಕೇವಲ ಬಿಂದು ಮಾತ್ರ ಎಂದುವಿವರಣೆಗಳನ್ನು ನೀಡುವ ಮೂಖಾಂತರ ಹೇಳಿದರು.ಗ್ರಾ.ಪಂ ಅಧ್ಯಕ್ಷ ಶಂಕ್ರಮ್ಮ ಭೀಮಶಪ್ಪ, .ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಮಹಮ್ಮದ್ ಅಲಿ ಜಮದಾರ, ಮುಖಂಡ ಜಾನ್ ವೆಲ್ಲ್ಸಿ, ಮುಖ್ಯ ಶಿಕ್ಷಕ ಗಂಗಾಧರ ಮಾತನಾಡಿದರು. ಶಿಬಿರಾರ್ಥಿಗಳಾದ ಹಣಮಂತ, ರವಿ, ವಾಸುದೇವ, ಸರೋಜಾ,ಜಯಶ್ರೀ, ಪ್ರವೀಣ ಕುಮಾರ ಶಿಬಿರದಲ್ಲಿ ತಮಗಾದ ಅನುಭವವನ್ನು ವಿವರಿಸಿದರು. ಮುಖಂಡರಾದ ಶಂಕರರೆಡ್ಡಿ ಕಂದಕೂರ, ಮುಖ್ಯಶಿಕ್ಷಕ ಗಂಗಾಧರ, ಉಪನ್ಯಸಕ ಮರಿಯಪ್ಪ ನಾಟೇಕರ್, ಎನ್ ಎಸ್ ಎಸ್ ಸಂಯೋಜಕ ಚಿನ್ನ ಆಶಪ್ಪ, ಹಣಮಂತ್ತು ದಾಸನ್, ಮುಖಂಡ ಶರಬುದ್ಧೀನ್, ಎನ್ ಎಸ್ ಎಸ್ ಘಟಕಾಧಿಕಾರಿ ಡಾಕ್ಟರ್ ಬಾಬುರಾಯ ದೊರೆ ವಂದನಾರ್ಪಣೆ ನೀಡಿದರು,, ಉಪನ್ಯಾಸಕರಾದ ಇಮ್ರಾನ್ ಖಾಜಿ, ಮಹೇಶ, ಪ್ರವೀಣ ಸೇರಿದಂತೆ ನೂರು ಜನ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.