ಪದವಿ ಕಾಲೇಜು ಪ್ರವೇಶಕ್ಕೆ ಆರ್ಥಿಕ ನೆರವು: ಡಾ. ಹೊನ್ನಗೆಜ್ಜೆ
ಕಲಬುರಗಿ:ಆ.5:ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಉಚಿತ ಪ್ರವೇಶ, ಉಚಿತ ಬಸ್ ಪಾಸ್ ಕಲ್ಪಿಸಿ ಅವರನ್ನು ದಾಖಲಿಸಿಕೊಳ್ಳಲಾಗುವುದು ಸರ್ವಜಾತಿ ಜನಾಂಗದ ಎಲ್ಲರಿಗೂ ಮಹಾವಿದ್ಯಾಲಯದಲ್ಲಿ ಒಳ್ಳೆಯ ರೀತಿಯಲ್ಲಿ ಅವಕಾಶ ಕಲ್ಪಿಸಿ ಅವರನ್ನು ಪದವೀದಾರರನ್ನಾಗಿ ಮಾಡುವುದು ನಮ್ಮ ಸಂಸ್ಥೆಯ ಗುರಿ ಉದ್ದೇಶ ಆಗಿದೆ ಎಂದು ಸೇವಾರತ್ನ , ಶಿಕ್ಷಣ ತಜ್ಞ , ಡಾ. ಶರಣು ಹೊನ್ನಗೆಜ್ಜೆ ಹೇಳಿದ್ದಾರೆ. ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಅವರ ಅಭಿಮಾನಿ ಬಳಗದ ಮತ್ತು ಶಿಷ್ಯ ಬಳಗದ ವತಿಯಿಂದ ಅದ್ದೂರಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ದೇವಮಾನವ, ಕಾಯಕ ರತ್ನ, ಗುರುಸಾರ್ವಭೌಮ ಸೇರಿ ಇನ್ನಿತರ ಪ್ರಶಸ್ತಿಗಳನ್ನು ನಮ್ಮ ಮುಡಿಗೆ ಏರಿಸಿದ್ದೀರಿ ಇದರಿಂದ ನನ್ನ ಶೈಕ್ಷಣಿಕ ಕ್ಷೇತ್ರದ, ಸಮಾಜ ಸೇವಾ ಕ್ಷೇತ್ರದ ಜವಾಬ್ದಾರಿ ಹೆಚ್ಚಾಗಿದೆ.ಹಾಗೂ ನನ್ನ ಅಚ್ಚುಮೆಚ್ಚಿನ ಸಲಹೆಗಾರರು ಮಾರ್ಗದರ್ಶಕರಾದ ಜಿಲ್ಲಾ ಪಂಚಾಯತ್ ಸದಸ್ಯರಾದ ದಿಲೀಪ್ ಆರ್ ಪಾಟೀಲ್, ಡಾಕ್ಟರ್ ಪದ್ಮರಾಜ್ ರಾಷಣಗಿ, ಡಾ. ಸಂಗಮೇಶ್ , ಡಾ. ಸಾಹೇಬ ಅಲಿ, ಶಿವಕುಮಾರ್ ಪಲ್ಲಾಪುರ್, ಅವರ ಮಾರ್ಗದರ್ಶನದಲ್ಲಿ, ಸಲಹೆಯಲ್ಲಿ ಹಂಶಿಕ ಶಿಕ್ಷಣ ಸಂಸ್ಥೆಯನ್ನು ಇನ್ನೂ ಬಾನ ಎತ್ತರಕ್ಕೆ ಬೆಳೆಸುತ್ತೇನೆ ಇದರ ಜೊತೆಯಲ್ಲಿ ನಮ್ಮ ಆತ್ಮೀಯ ಗೆಳೆಯರಾದ ಮಲ್ಲಿಕಾರ್ಜುನ್ ಮೇಟಿ, ಪಿಎಸ್‍ಐ ಯಲ್ಲಾಲಿಂಗ, ಪ್ರದೀಪ್ ಕುಮಾರ್, ಅಭಿಲಾಶ್ ಉದಯ್, ಗೌಡಪ್ಪ, ಆನಂದ ನಾಯಕ್, ರವಿಚಂದ್ರ ಗುತ್ತೇದಾರ್, ಸಂದೀಪ್ ಸಲಗರ್ ಇವರ ಸಹಾಯ ಸಹಕಾರ ಯಾವಾಗಲೂ ಇದೇ ರೀತಿ ಮುಂದುವರೆಯಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಷ್ಮಾವತಿ ಎಸ್, ಅನನ್ಯ ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.