ಶ್ರಾವಣ ಶಿವ ಸಂಚಾರ ಹಾಗೂ ಸಿದ್ದಾಂತ ಶಿಖಾಮಣಿ ಅಭಿಯಾನಕ್ಕೆ ಚಾಲನೆ
ಬೀದರ್: ಆ.5:ಮಾನವನ ಅಂತರಂಗ ಹಾಗೂ ಬಹಿರಂಗ ವಿಕಾಸಕ್ಕೆ ಶ್ರೀ ಸಿದ್ದಾಂತ ಖಿಖಾಮಣಿ ಮಹಾ ಮಾರ್ಗವನ್ನು ತೋರುವ ಮಹಾನ ಗ್ರಂಥವೆಂದು ಕಲಬುರಗಿ ಕಡಗಂಚಿ ಮಠದ ಷ.ಬ್ರ ಪೂಜ್ಯ ವೀರಭದ್ರ ಶಿವಾಚಾರ್ಯರು ನುಡಿದರು.
ಚಿಟಗುಪ್ಪ ತಾಲೂಕಿನ ಚಾಂಗಲೇರಿ ಶ್ರೀ ವೀರಭದ್ರೆಶ್ವರ ದೇವಸ್ಥಾನದಲ್ಲಿ ಜರುಗಿದ ಶ್ರಾವಣ ಶಿವ ಸಂಚಾರ ಹಾಗೂ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ಸಮಸ್ತ ಮಾನವ ಕುಲದ ಕಲ್ಯಾಣಕ್ಕೆ ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ಶಿವ ಸಿದ್ದಾಂತದ ಸಾರ ಸಂಗ್ರಹವಾದ ಸಿದ್ದಾಂತ ಶಿಖಾಮಣಿಯು ಅದೊಂದು ಮಾನವ ಧರ್ಮ ಗ್ರಂಥವಾಗಿದೆ. ಈ ಅಭಿಯಾನದ ಮೂಲಕ ಎಲ್ಲೆಡೆ ಪ್ರಚಿರಪಡಿಸುತ್ತಿರುವ ಕಾರ್ಯ ಅಮೋಘವಾಗಿದೆ ಎಂದು ಶ್ರೀಗಳು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಚಾಂಗಲೇರಿ ಚಿಟಗುಪ್ಪ ಮಠದ ಷ.ಬ್ರ ಪೂಜ್ಯ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ಸಿದ್ದಾಂತ ಶಿಖಾಮಣಿಯು ಮನುಷ್ಯನನ್ನು ಮಹಾದೇವನನ್ನಾಗಿ ಪರಿವರ್ತಿಸುವ ಧಾರ್ಮಿಕ ವಿಜ್ಞಾನ ಗ್ರಂಥವಾಗಿದೆ. ಎಲ್ಲರು ಇದರ ಅಧ್ಯಯನ ಮಾಡಬೇಕು. ಮಠಾಧೀಶರು ಮನೆ ಮನೆಗೆ ಇದನ್ನು ತಲುಪಿಸುವ ಕಾರ್ಯದಲ್ಲಿ ಮುಂದೆ ಬರಬೇಕು. ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನ ಇದೊಂದು ಪವಿತ್ರ ಕಾರ್ಯವಾಗಿದ್ದು ಬೆಮಳಖೇಡ ಶ್ರೀಗಳ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಅಭಿಯಾನದ ರುವಾರಿಗಳಾದ ಬೆಮಳಖೇಡ ಮಠದ ಪೂಜ್ಯ ಷ.ಬ್ರ ರಾಜಶೇಖರ ಶಿವಾಚಾರ್ಯರು ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನ ಅನೇಕ ವರ್ಷಗಳ ಕನಸ್ಸಿನ ಬೆಳಕಾಗಿದೆ. ಕಶಿ ಜಗದ್ಗುರುಗಳಾದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಇದಕ್ಕೆ ಪ್ರೇರಣೆಯಾಗಿರುವರು. ನಿತ್ಯ ಒಂದೆರಡೆ ಕಡೆ ಶ್ರೀ ಸಿದ್ದಾಂತ ಶಿಖಾಮಣಿ ಪ್ರವಚನ, ಪಾರಾಯಣ, ಲಿಂಗದೀಕ್ಷೆ, ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಮುಂತಾದ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಸಿದ್ದಾಂತ ಶಿಕಾಮಣಿ ಪಾರಾಯಣದಿಂದ ಮನುಷ್ಯ ಮಾನಸಿಕವಾಗಿ ಸದೃಢವಾಗುವ ಎಲ್ಲ ಸಾಧ್ಯತೆಗಳಿವೆ. ಅಭಿಯಾನ ಪ್ರಾರಂಭವು ನಿರಿಕ್ಷೆಗೂ ಮೀರಿ ನಡೆದಿರುವುದು ಅತ್ಯಂತ ಯಶಸ್ವಿಯಾಗುವ ವಿಶ್ವಾಸ ತಂದಿದೆ ಎಂದು ಶ್ರೀಗಳು ಹೇಳಿದರು.
ಗಂಗಧರ ಶಾಸ್ತ್ರಿ ಧನ್ನೂರ್, ನಾಂದಿನುಡಿ ಹೇಳಿದರು. ಬಸವರಾಜ ಹಾಲಹಳ್ಳಿ ಅನುಭಾವ ನೀಡಿದರು. ರಾಜಶೇಖರ ಪುಜಾರಿ ಎಲ್ಲರನ್ನು ಸ್ವಾಗತಿಸಿದರು. ಸಾಲಿ ಕಾರ್ಯಕ್ರಮ ನಿರುಪಿಸಿದರು.
ಚಂದ್ರಶೇಖರ ಚನಶೆಟ್ಟಿ, ಹಣಮಂತಪ್ಪ ಮರಕುಂದಾ, ವೀರಶೆಟ್ಟಿ ಪಟ್ನೆ, ವೀರುಪಾಕ್ಷ ಗಾದಗಿ, ಪ್ರಭು ಸಾವಳಗಿ, ಕುಶಾಲರಾವ ಯಾಬಾ, ಸಂಜುಕುಮಾರ ಸಿದ್ದಾಪುರ, ಶಂಕ್ರೆಪ್ಪ ಬೋರಾಳೆ, ರಾಮಶೆಟ್ಟಿ ಮೆಂಗಾ, ಶ್ರೈಲೇಂದ್ರ ಕಾವಡಿ, ದೇವಸ್ಥಾನದ ಕಾರ್ಯದರ್ಶಿ ಸಂಜಯ ದೇಸಾಯಿ, ವಿರೆಶ ಪೂಜಾರಿ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.