ಪ್ರಥಮ ದರ್ಜೆ ಕಾಲೇಜಿನಲ್ಲಿ ಬೇರು- ಚಿಗುರು ಕಾರ್ಯಕ್ರಮ
ಔರಾದ :ಆ.5: ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಔರಾದ ನಲ್ಲಿ ದಿ. 03 ಶನಿವಾರ ರಂದು ಹಳೆ ವಿದ್ಯಾರ್ಥಿಗಳ ಸಂಘದ ಸಹಭಾಗಿತ್ವದಲ್ಲಿ ಬೇರು- ಚಿಗುರು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲೆ ಅಂಬಿಕಾದೇವಿ ಕೋತಮಿರ್ ಅವರು ಮಾತನಾಡಿ, ಒಂದು ಕುಟುಂಬ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಹಿರಿಯರ ಮಾರ್ಗದರ್ಶನ ತುಂಬಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂದಿನ ಕಾಲೇಜಿನ ವಿದ್ಯಾರ್ಥಿಗಳು ಹಳೆಯ ವಿಧ್ಯಾರ್ಥಿಗಳ ಅನುಭವದ ಮಾರ್ಗದರ್ಶನದಲ್ಲಿ ನಡೆಯಬೇಕು ಕಾಲೇಜಿನ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಅನುಕರಣೀಯ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕರಾದ ಡಾ. ಜೈಶೀಲಾ ಅವರು ಮಾತನಾಡಿ ಬೇರು – ಚಿಗುರು ಕಾರ್ಯಕ್ರಮ ಕಾಲೇಜು ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿದೆ ಹಳೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಬೇರು ಚಿಗುರು ಎಂಬ ವಿನೂತನ ಕಾರ್ಯಕ್ರಮ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಅನುಷ್ಠಾನ ಗೊಳಿಸಿ ಆದೇಶಿಸಿದೆ ಹಳೆ ಹಾಗೂ ಹೊಸ ವಿದ್ಯಾರ್ಥಿಗಳು ಸೇರಿ ಕಾಲೇಜು ಅಭಿವೃದ್ಧಿಗೆ ಕೈ ಜೊಡಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಅಶೋಕ ಕೋರೆ, ವೀನಾಯಕ ಕೋತಮಿರ್, ಊರ್ವಶಿ ಕೂಡ್ಲೆ, ದಯಾನಂದ ಬಾವಗೆ, ಸುಬ್ಬಣ್ಣ ಮೂಲಗೆ, ಸಂದೀಪ ಪಾಟೀಲ, ರಿಯಾಜಪಾಶಾ ಕೊಳ್ಳೂರ, ಶಿವು ತೆಲಿ, ತುಳಸಿರಾಮ ಮಾನೆ, ವಿಜಯ ಠಾಕೂರ್, ವಿದ್ಯಾಸಾಗರ ಉಪ್ಪೆ, ಮಹಾದೇವ ಉಪ್ಪೆ, ವಿನೋದ ಡೊಳೆ, ಆನಂದ ಕಾಂಬಳೆ, ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.
ಕಾಲೇಜು ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಮುಂದಾಗಬೇಕಾಗಿದೆ. ಕಾಲೇಜಿಗೆ ನ್ಯಾಕ್ ವತಿಯಿಂದ ಬಿ ಗ್ರೇಡ್ ಸಿಕ್ಕಿದ್ದು ಸಂತೋಷದ ವಿಷಯ ಕಾಲೇಜಿನ ಅಭಿವೃದ್ಧಿಗೆ ಹಾಗೂ ಉನ್ನತ ಶಿಕ್ಷಣದ ಕೋರ್ಸ್ ಗಾಗಿ ತಾಲೂಕಿನ ವಿದ್ಯಾರ್ಥಿಗಳ ಉನ್ನತಿಗಾಗಿ ಹಗಲಿರುಳು ನಾವೇಲ್ಲ ದುಡಿಯೊಣ.
ಅಂಬಾದಾಸ ನಳಗೆ
ಅಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ