ಅಫಜಲಪುರದಲ್ಲಿ ಶಾಲಾ ಮಕ್ಕಳಿಂದ ಗೆಳೆಯರ ದಿನಾಚರಣೆ
ಅಫಜಲಪುರ: ಆ.5:ವಿಶ್ವ ಗೆಳೆಯರ ದಿನದ ಪ್ರಯುಕ್ತ ಪಟ್ಟಣದ ಎಂ.ಜಿ ನಗರದಲ್ಲಿ ಶಾಲಾ ಮಕ್ಕಳಿಂದ ಬ್ಯಾಂಡ್ ವಿತರಿಸುವ ಮೂಲಕ ಗೆಳೆಯರ ದಿನ ಆಚರಿಸಲಾಯಿತು.
5ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಸಿಂಗೆ ಮಾತನಾಡುತ್ತಾ ಪ್ರತಿವರ್ಷ ಶಾಲೆಯಲ್ಲಿ ಗೆಳೆಯರ ದಿನದ ಪ್ರಯುಕ್ತ ಸಹಪಾಠಿಗಳಿಗೆ ಬ್ಯಾಂಡ್ ಕಟ್ಟಿ ಆಚರಣೆ ಮಾಡುತ್ತಿದ್ದೇವು. ಈ ಬಾರಿ ರವಿವಾರ ಶಾಲೆ ರಜೆ ಇರುವುದರಿಂದ ಬಡಾವಣೆಯಲ್ಲಿನ ಗೆಳತಿಯರಿಗೆ ಮನೆ ಮನೆಗೆ ತೆರಳಿ ಬ್ಯಾಂಡ್ ಕಟ್ಟಿ ಗೆಳೆಯರ ದಿನ ಆಚರಿಸಿ ಸಂಭ್ರಮಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಡವಾಣೆ ಮಕ್ಕಳಾದ ದಿವ್ಯ, ಪೂಜಾ, ಪವಿತ್ರಾ, ಶ್ರಾವಣಿ, ಶ್ರಾವ್ಯ, ದೀಕ್ಷಾ, ಶ್ರೇಯಾ ಇದ್ದರು.