138 ಜೋಡಿಗಳ ಸರಳ ಸಾಮೂಹಿಕ ವಿವಾಹ
ಬೀದರ:ಆ.5: ಬುದ್ಧನ ವಿಚಾರಗಳನ್ನ ಮರೆತು, ತಮ್ಮಲಿ ಸಂಪತ್ತು ಸವಲತ್ತು ಇದ್ದರೆ ಅದನ್ನ ಸಮಾಜದ ಒಳತಿಗಾಗಿ ಬಳಸುವುದು ಎಂದು ಹೇಳಿದ ಬುದ್ಧ. ಸರ್ವ ಜನಾಂಗಕ್ಕೆ ಒಳ್ಳೆಯದು ಮಾಡುವ ಉದ್ದೇಶ ನಮ್ಮೆಲ್ರದ್ದು ಆಗಿರಬೇಕು.ಜಗತ್ತೇ ಭಾರತ ದೇಶದ ಕಡೆ ನೋಡುವ ಹಾಗೆ ಹಾಗೂ ಪ್ರೀತಿ, ಭ್ರಾತೃತ್ವ , ಸಾಮರಸ್ಯ ಹಾಗೂ ಸಮಾನತೆಯ ಸಮಾಜ ಕಟ್ಟಿರುವ ಶ್ರೇಯ ಬುದ್ಧನಿಗೆ ಸಲ್ಲಬೇಕು.ಬುದ್ಧ ಕೊಟ್ಟಿದು ಮಾರ್ಗ ಬಸವ ಕೊಟ್ಟಿದ್ದು ಸನ್ಮಾರ್ಗ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿದ್ದು ರಾಜ ಮಾರ್ಗ.
ಸಾವಿತ್ರಿ ಬಾಯಿ ಫುಲೆ ಅವರ ಜೀವನ ಅವರು ನಡೆದ ಮಾರ್ಗ ನಮಗೆ ಸ್ಫೂರ್ತಿ ಆಗಬೇಕು. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ನಾವು ನೀವು ಬದುಕಬೇಕು. ಜ್ಞಾನ ಅಜ್ಞಾನದ ನಡುವಿನ ಯುದ್ಧದಲ್ಲಿ ನಮಗೆ ಈ ಮಹಾನ್ ಚೇತನಗಳ ವಿಚಾರಗಳು ನಮಗೆ ನಮ್ಮ ಪಂಚೇಂದ್ರಯಗಳ ಮೇಲೆ ಜಯ ಸಾಧಿಸಲು ಮಾರ್ಗಗಳು. ಆಡಂಬರದ ಮದುವೆ ಬದಲಾಗಿ ಇಂತಹ ಒಂದು ಅರ್ಥ ಪೂರ್ಣ ಹಾಗೂ ಸರಳ ಕಲ್ಯಾಣ ಮಹೋತ್ಸವ ಆಯೋಜಿಸಿರುವ ಈ ಸಂಘಟನೆಗಳ ಕಾರ್ಯ ಶ್ಲಾಘನೀಯ.
ದಾಂಪತ್ಯ ಜೀವನದಲ್ಲಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮನಸ್ಸು ಒಂದು ಮಾಡಿಕೊಂಡು ಜೀವಿಸಿದರೆ, ಅದೇ ಶಾಂತಿ, ಅದೇ ಸುಖ ಜೀವನಕ್ಕೆ ನಾಂದಿ.ಎಂದು ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಗುರುಬಸವ ದೇವರು ಬುದ್ಧ ಬೆಳಕು ಟ್ರಸ್ಟ್, ಸಂವಿಧಾನ ಜಾಗೃತಿ ವೇದಿಕೆ ಹಾಗೂ ಬುದ್ಧ ಬಸವ ಅಂಬೇಡ್ಕರ್ ಯುವ ಸಂಘದ ಸಂಯುಕ್ರಾಶ್ರಯದಲ್ಲಿ 75ನೇ ಸಂವಿಧಾನ ಅಮೃತ ಮಹೋತ್ಸವ, ಬುದ್ಧ ಬಸವ ಅಂಬೇಡ್ಕರ್ ಜಯಂತ್ಯೋತ್ಸವ ನಿಮಿತ್ತ ಆಣದೂರ ಬುಧ್ದ ವಿಹಾರದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಮತ್ತು ಜಿಲ್ಲಾ ಮಟ್ಟದ ಜಾನಪದ ಸಂಭ್ರಮ-2024 ತಥಾಗತ್ ಗೌತಮ ಬುಧ್ದರ ಮೂರ್ತಿಗೆ ಪೂಜೆ ಸಲ್ಲಿಸಿ ಸಂವಿಧಾನದ ಪ್ರಸ್ಥಾವನ್ನೆಯನ್ನು ಓದಿಸಿ ಉಧ್ಘಾಟಿಸಿದರು.
ಸಮಾರಂಭದ ಸಾನಿಧ್ಯವನ್ನು ಪೂಜ್ಯ ಭಂತೆ ಧಮ್ಮಾನಂದ ಮಹಾಥೇರೋ ವಹಿಸಿದರು
ಅಧ್ಯಕ್ಷತೆಯನ್ನು ಜ್ಞಾನ ಉದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ ವಹಿಸಿದರು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌಧ್ದೆ, ಕೊಳಾರ ಗ್ರಾಮ ಪಂಚಾಯತ ಸದಸ್ಯರಾದ ವಿಜಯಕುಮಾರ ಭಾವಿಕಟ್ಟಿ, ಸಂತೋಷ ಬಕ್ಕಚೋಡಿ, ಬೌದ್ಧ ಆಚರ್ಯ ಶಂಭುಲಿಂಗ ಬಾನೆ ಭಾಗವಹಿಸಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ, ಯುವ ಉದ್ಯಮಿ ದೀಪಕ ದಿಲ್ಲೆ, ನಗರ ಸಭೆ ನಾಮನಿರ್ದೇಶನ ಸದಸ್ಯ ಸೂರ್ಯಕಾಂತ ಸಾಧೂರೆ ರವರಿಗೆ ಗೌರವ ಸನ್ಮಾನ ಮಾಡಲಾಯಿತು.
ಖ್ಯಾತ ಜಾನಪದ ಕಲಾವಿದರಾದ ಶಂಕರ ಚೊಂಡಿ ಮತ್ತು ಸಂಗಡಿಗರು, ದೇವಿದಾಸ ಚಿಮಕೊಡ ಸಂಗಡಿಗರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು ಬುಧ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕ ಮಾತನಾಡಿದರು ಬುಧ್ದ ಬಸವ ಅಂಬೇಡ್ಕರ್ ಯುವ ಸಂಘದ ಸದಸ್ಯ
ಅಮರ ಅಲ್ಲಾಪೂರ ಸ್ವಾಗತಿಸಿದರು, ಸಂವಿಧಾನ ಜಾಗೃತಿ ವೇದಿಕೆ ಸದಸ್ಯ ಪ್ರಕಾಶ ರಾವಣ ವಂದಿಸಿದರು
ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್, ಪ್ರಮುಖರಾದ ಶರಣು ಫುಲೆ,ರಮೇಶ ಮಾಲೆ,ನೀಲಕಂಠ ಕಾಂಬಳೆ, ಗೌತಮ ಮುತಂಗಿಕರ್, ಕೃಷ್ಣ ಭೂತಾಳೆ,ಮಹಾಲಿಂಗ ಸಕ್ಪಾಲ್ ಅವಿನಾಶ್ ರಂಜೋಳ, ಅರುಣಕುಮಾರ, ಪಿಟರ್ ಇಸ್ಲಾಂಪೂರ ಇನಿತರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ 138 ಜೋಡಿಗಳ ಸರಳ ಸಾಮೂಹಿಕ ವಿವಾಹ ಜರುಗಿತು ಎಂದು ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಾರೆ.