ವಿದ್ಯಾರ್ಥಿಗಳು ಈ ದೇಶದ ಆಸ್ತಿ: ನಿವೃತ್ತ ಯೋಧ ಎಳಮೆಲಿ
ಆಳಂದ:ಆ.5: ವಿದ್ಯಾರ್ಥಿಗಳು ಈ ದೇಶದ ಆಸ್ತಿಯಾಗಿದ್ದು, ಉತ್ತಮ ಶಿಕ್ಷಣ ಪಡೆದು ದೇಶ ಸೇವೆಯ ಮೂಲಕ ಗುರಿ ಸಾಧಿಸಲು ಮುಂದಾಗಬೇಕು ಎಂದು ಪಟ್ಟಣದ ಶರಣನಗರದ ನಿವಾಸಿಯಾಗಿರುವ ನಿವೃತ್ತ ಯೋಧ ಚಂದ್ರಕಾಂತ ಎಸ್. ಎಳೆಮೆಲಿ ಅವರ ಹೇಳಿದರು.
ಪಟ್ಟಣದ ಭೀಮನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲಕರು ಮತ್ತು ಶಾಲೆಯಿಂದ ತಮಗೆ ಶನಿವಾರ ನೀಡಿದ ಸೇವಾ ನಿವೃತ್ತಿಯ ಸ್ವಾಗತ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶರಣನಗರದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿರುವ ನಾನು ಸೈನ್ಯದಲ್ಲಿ ಭರ್ತಿಯಾಗಿ ಸೇವೆ ಸಲ್ಲಿಸಿ ನಿವತ್ತಿಯಾಗಿದ್ದು, ಮುಂದಿನ ಯುವಕರು ಸಹ ದೇಶ ರಕ್ಷಣೆಯಂತ ಕಾರ್ಯಕ್ಕೆ ಮುಂದಾಗಬೇಕು. ಯೋಧರಿಗೆ ಸಮಾಜ ನೀಡುವ ಗೌರವ ಸ್ಫೂರ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕ ಶಶಿಕಲಾ, ಡಾ. ಅವಿನಾಶ ದೇವನೂರ್ ಮಾತನಾಡಿ, ಯೋಧರ ದೇಶ ಸೇವಾ ಕಾರ್ಯವು ಪ್ರಶಂಸನೀಯ ಮತ್ತು ಸ್ಮರಣಿಯ ಮಾದರಿಯಾಗಿದೆ ಎಂದು ಹೇಳಿದರು.
ಮಹಾಂತೇಶ ದೇವನೂರ, ಸೋಮನಾಥ ವಿಭೂತೆ, ಮುತ್ತಣ್ಣ ಜಂಗಲೆ, ಅಜಯ ಸಿಎಂ, ಸಿದ್ಧಾರ್ಥ ಸಿಂಗೆ, ಅಕ್ಷಯ ಮಂಟಕಿ, ಸುಧಾಕರ್ ಮುದಗಲೆ, ಮತ್ತಿತರು ಉಪಸ್ಥಿತರಿದ್ದರು.