ವಸತಿ ನಿಲಯದಲ್ಲಿ ಅವ್ಯವಸ್ಥೆ: ಕ್ರಮಕ್ಕೆ ಸೂಚನೆ
ಬಾದಾಮಿ,ಆ.೫: ತಾಲೂಕಿನ ಜಾಲಿಹಾಳ ಪಂಚಾಯತಿ ವ್ಯಾಪ್ತಿಯ ದೇವರಾಜ್ ಅರಸು ಬಾಲಕರ ವಸತಿ ನಿಲಯಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ ರಾಮತ್ನಾಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸ್ಟೇಲ್ ಅವ್ಯವಸ್ಥೆಯಿಂದ ಖುದ್ದಾಗಿ ವೀಕ್ಷಣೆ ಮಾಡಿ ಸಂಬAದಿಸಿದ ವಾರ್ಡನ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಬಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ನಿಲಯದಲ್ಲಿ ಶಾಲಾ ಮಕ್ಕಳಿಗೆ ಅತ್ಯಂತ ಕಳಪೆ ಗುಣಮಟ್ಟದ ಬೆಳಗಿನ ಊಟವನ್ನು ನೀಡಿದ್ದು ಕಂಡುಬAದಿತು. ವಸತಿನಿಲಯದಲ್ಲಿ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಶೌಚಾಲಯ ಮತ್ತು ಸ್ನಾನ ಸ್ವಚ್ಛತೆ ಇಲ್ಲದ ಕಾರಣ ಮಕ್ಕಳು ಹೊರಗಡೆ ಸ್ನಾನ ಮಾಡುತ್ತಾರೆ. ಇದರಿಂದ ಮಕ್ಕಳಿಗೆ ಸಣ್ಣ ಸಣ್ಣ ಗುಳ್ಳೆಗಳು ಆಗಿವೆ. ನಿಲಯದಲ್ಲಿ ಸಿಸಿ ಕ್ಯಾಮೆರಾ ಇಲ್ಲ. ಯಾವುದೇ ರೀತಿಯ ಮಕ್ಕಳ ರಕ್ಷಣಾನೀತಿ ಯನ್ನು ಅಳವಡಿಸಿಕೊಂಡಿರುವುದಿಲ್ಲ. ದಾಸ್ತಾನು ಇರುವ ಆಹಾರ ಧಾನ್ಯಗಳು ಅತ್ಯಂತ ಕಳಪೆ ಮಟ್ಟದ್ದಾಗಿದೆ. ಈ ಕುರಿತು ತಾಲೂಕ ಮಟ್ಟದ ಅಧಿಕಾರಿಗೆ ದೂರವಾಣಿ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ. ನಂತರ ಬಿಸಿಎಂ ಅಧಿಕಾರಿ ಬಂದಾಗ ಜಾಲಿಹಾಳ ವಸತಿ ನಿಲಯದ ವಾರ್ಡನ್ ರವರಿಗೆ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.