ದುಶ್ಚಟಗಳು ಯುವಕರ ಪ್ರಗತಿಗೆ ಅಡ್ಡಿ
ಆಳಂದ:ಆ.5:ಸಮಾಜದ ಸಂಪನ್ಮೂಲವಾಗಿ ರೂಪಗಳಬೇಕಾದ ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ತಿಳಿಸಿದರು .
ಆಳಂದ ಪಟ್ಟಣದ ಸಂಬುದ್ಧ ಪದವಿ ಕಾಲೇಜಿನಲ್ಲಿ ಭಾನುವಾರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಪದವೀಧರರಿಗೂ ಸರ್ಕಾರಿ ಉದ್ಯೋಗ ದೊರೆಯುವುದಿಲ್ಲ, ನಮ್ಮ ಭಾಗದ ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯವಂತರಾಗಿ ಬೆಳೆಯಬೇಕಿದೆ. ಕೃಷಿ, ಸ್ವಯಂ ಉದ್ಯೋಗ ,ಹೊಸ ತಂತ್ರಜ್ಞಾನದಲ್ಲಿ ಕುಶಲತೆ ಪಡೆದರೆ ಮಾತ್ರ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂದರು.
ಮಾದನ ಹಿಪ್ಪರಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಬಸವಂತರಾವ ಪಾಟೀಲ್ ಮಾತನಾಡಿ ಮೊಬೈಲ್ ನ ಅತಿಯಾದ ಆಕರ್ಷಣೆಯು ವಿದ್ಯಾರ್ಥಿಗಳ ಮನಸ್ಸು, ಏಕಾಗ್ರತೆ, ಸಂವೇದನೆಗಳನ್ನು ಹಾಳು ಮಾಡುತ್ತವೆ. ಪುಸ್ತಕ, ಪತ್ರಿಕೆ ,ಕಾದಂಬರಿ ಹಾಗೂ ಸಾಧಕರು ಜೀವನ ಚರಿತ್ರೆಗಳು ಓದುವ ಹವ್ಯಾಸ ಬೆಳೆಸಿಕೊಂಡರೆ ನಿಮ್ಮನ್ನು ಸಾಧನಿಗೆ ಪ್ರೇರೆಪಿಸಲಿವೆ ಎಂದರು.
ಆಡಳಿತ ಅಧಿಕಾರಿ ಮಹಾದೇವಪ್ಪ ಪಾಟೀಲ್, ನಿವೃತ್ತ ಮುಖ್ಯ ಶಿಕ್ಷಕ ಅಪ್ಪಾಸಾಹೇಬ ತೀರ್ಥೆ ಮಾತನಾಡಿದರು.
ಪ್ರಾಂಶುಪಾಲ ಸಂಜಯ ಎಸ್ ಪಾಟೀಲ್ ಅಧ್ಯಕ್ಷತೆ ವಹಿಸಿದರು. ಪ್ರಾಧ್ಯಾಪಕರಾದ ಬಾಬುರಾವ ಚಿಕಣಿ, ಶರಣಬಸಪ್ಪ ಪರೇಣಿ, ಜಗದೀಶ್ ಮೂಲಗೆ, ಮಹಾದೇವಿ ಪಾಟೀಲ್, ಭೀಮಾಶಂಕರ ಅತನೂರೆ, ಮಹಾದೇವಿ ಮುನ್ನೋಳಿ, ಸುರೇಶ್ ಪಾಟೀಲ್, ಹುಸೇನ್ ಶ್ರೀಚಂದ, ಸಿದ್ದಾರ್ಥ ಹಸೂರೆ, ಲಕ್ಕಮ್ಮ ಗಂಧೆ, ಪ್ರಮೋದ ಪಂಚಾಳ, ಉಮಾದೇವಿ ಜವಳಿ, ಸನಾ ಬಂಗರಗಿ, ಶ್ರೀದೇವಿ ಸುತಾರ, ಸವಿತಾ ಜೂಜಾರ, ಶ್ರೀದೇವಿ ಜಕಾಪುರೆ, ಶಾಂತಪ್ಪ ಸುತಾರ, ಯೂಸೂಫ ಆಳಂದ ಉಪಸ್ಥಿತರಿದ್ದರು. ಧಾನೇಶ್ವರಿ ಹಿರೇಮಠ ನಿರೂಪಿಸಿದರು, ಬಾಬುರಾವ ಚಿಕಣಿ ಸ್ವಾಗತಿಸಿದರು. ಶಿವಮ್ಮ ಹಣಮಶೆಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಅಪ್ಪಾಸಾಹೇಬ ತೀರ್ಥೆ ಅವರನ್ನು ಸತ್ಕರಿಸಲಾಯಿತು.