ಆಳಂದ ತಾಲೂಕಿನಾದ್ಯಂತ ಶ್ರಾವಣ ಮಾಸಾಚರಣೆ ಶುರು
ಆಳಂದ:ಆ.5: ತಾಲೂಕಿನಲ್ಲಿ ಭಾನುವಾರ ಅಮವಾಸ್ಯದಂದು ಒಂದು ತಿಂಗಳ ಕಾಲ ಆರಂಭಗೊಂಡ ಶ್ರಾವಣ ಮಾಸವು ಧಾರ್ಮಿಕ ಆಚರಣೆ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳಿಂದ ಎಂದಿನಂತೆ ಭಕ್ತಿ ಭಾವದ ಮಧ್ಯೆ ಆಚರಣೆ ಶರುವಾಗಿದ್ದು ಕಂಡಬಂದಿತು.
ಪ್ರಸಕ್ತ ಸಾಲಿನ ಮುಂಗಾರಿಗೆ ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆಯಿಂದಾಗಿ ಇಳುವರಿಯಲ್ಲಿರುವ ರೈತ ಸಮುದಾಯ ಸಂತಷದೊಂದಿಗೆ ಸಾಂಪ್ರದಾಯಿಕ ಆಚರಣೆಗಳಿಗೂ ಎಂದಿನಂತೆ ತೊಡಗಿದೆ.
ಪ್ರತಿ ವರ್ಷದಂತೆ, ಈ ವರ್ಷವೂ ಪಟ್ಟಣ ಹಾಗೂ ಗ್ರಾಮೀಣ ಭಾಗದ ದೇವಸ್ಥಾನ, ಮಠ, ಮತ್ತು ಮಂದಿರಗಳಲ್ಲಿ ಪುರಾಣ ಪ್ರವಚನ, ಉಪನ್ಯಾಸ, ಮತ್ತು ದೇವರುಗಳಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ, ಭಜನೆ ಸೇರಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ಭಕ್ತರ ಒಗ್ಗೂಡಿ ನೆರವೇರಿಸುವುದು ಸಾಮಾನ್ಯವಿದೆ.
ದೇವಾಲಯಗಳಲ್ಲಿ ಪುರಾಣಗಳ ವಾಚನ ಮತ್ತು ಉಪನ್ಯಾಸಗಳು ನಡೆಯುತ್ತವೆ. ಈ ಪ್ರವಚನಗಳಲ್ಲಿ ಧಾರ್ಮಿಕ ಕಥೆಗಳು, ಪುರಾಣಿಕ ಘಟನೆಗಳು, ಮತ್ತು ನೈತಿಕ ಬೋಧನೆಗಳನ್ನು ಆಲಿಲಿಸುತ್ತಾರೆ. ಮಠ ಮತ್ತು ಮಂದಿರಗಳಲ್ಲಿ ಭಜನೆಗಳು ಸಂಜೆ ನಡೆಯುತ್ತವೆ. ಭಕ್ತರು ಸಾಂಪ್ರದಾಯಿಕ ಹಾಡುಗಳೊಂದಿಗೆ ಶಿವನಾಮ ಸ್ಮರಣೆಯಲ್ಲಿ ಭಾಗವಹಿಸುವುದು ಸಾಮಾನ್ಯವಿದೆ. ಬೆಳಗಿನ ಜಾವ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಶ್ರಾವಣ ಮಾಸದ ಕೊನೆಗೆ, ವಿವಿಧ ಗ್ರಾಮಗಳಲ್ಲಿ ಮತ್ತು ಪಟ್ಟಣದಲ್ಲಿ ಭಜನೆ ಸಮಾರೋಪ, ಖಾಂಡ್, ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳು ಭಕ್ತರು ಒಟ್ಟುಗೂಡಿ ಉತ್ಸಾಹದಿಂದ ಭಾಗವಹಿಸುವ ಅದ್ಭುತ ಕ್ಷಣಗಳನ್ನು ಎಂದುನಂತ ಈ ಬಾರಿ ತಂದುಕೊಳ್ಳಲು ಮುಂದಾಗಿದ್ದಾರೆ.
ಶ್ರಾವಣ ಮಾಸ ಹಬ್ಬದ ವಾತಾವರಣದಿಂದ ಊರಿನ ಜನರು ಪರಸ್ಪರ ಸಹಕಾರ ಮತ್ತು ಸಂತೋಷವನ್ನು ಅನುಭವಿಸುತ್ತಾರೆ. ದೇವಸ್ಥಾನಗಳಲ್ಲಿನ ಧಾರ್ಮಿಕ ಕಾರ್ಯಕ್ರಮಗಳು, ಪ್ರಸಾದ ವಿತರಣೆ, ಹಾಗೂ ಜಾತ್ರೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾನ ಉಲ್ಲಾಸವನ್ನು ನಮ್ಮ ಸಂಸ್ಕøತಿಯನ್ನು, ಪರಂಪರೆಯನ್ನು, ಮತ್ತು ಧಾರ್ಮಿಕತೆಗೆ ಸೇರಿದ ಪ್ರೀತಿ ಮತ್ತು ನಂಬಿಕೆಯನ್ನು ಕಾಪಾಡುವ ಸಾಂಪ್ರದಾಯ ಎಂದಿನಂತೆ ಈಗಲೂ ಇಲ್ಲಿಯ ಜನರು ಮುನ್ನೆಡೆಸಿಕೊಂಡು ಬರತೊಡಗಿದ್ದಾರೆ.
ಈ ರೀತಿಯ ಆಚರಣೆಗಳು ಭಕ್ತಾದಿಗಳಿಗೆ ಧಾರ್ಮಿಕ ಶಾಂತಿ ಮತ್ತು ಆಧ್ಯಾತ್ಮಿಕ ಸುಖವನ್ನು ತರಿಸುತ್ತವೆ ಎಂಬ ನಂಬಿಕೆಯಿಂದಲೇ ನೂರಾರು ವರ್ಷಗಳಿಂದಲೂ ಶ್ರಾವಣ ಮಾಸ ವರ್ಷಷ ಧಾರ್ಮಿಕ ಆಚರಣೆಗೆ ಪವಿತ್ರ ತಿಂಗಳೆಂದು ನಂಬಿಕೊಂಡಿದ್ದಾರೆ.
ಪಟ್ಟಣದಲ್ಲಿ ಕಾರ್ಯಕ್ರಮ:
ಪಟ್ಟಣದಲ್ಲಿ ಶರಣಮಂಟಪ, ಮಾಲ್ಗಣಾಧಿಶ್ವರ, ಭಕ್ತಮಾರ್ಕಂಡೆಯ, ತಿಂಥಣಿಯ ಮೌನೇಶ್ವರ ದೇಗುಲ, ಭಾರತ ನಗರದಲ್ಲಿನ ಶ್ರೀ ಸಿದ್ಧರೂಢರ ಮಠದಲ್ಲಿ ಕಾರ್ಯಕ್ರಮ ಹಾಗೂ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮ ಮತ್ತು ಇನ್ನೂಳಿದ ಮಹಾದೇವ ಮಂದಿರ, ಬಾಳನಕೇರಿ, ಸುಲ್ತಾನಪೂರಗಲಿ, ಕಪ್ರ್ಯೂರಲಿಂಗ, ಹನುಮಾನ ದೇವಸ್ಥಾನ, ಸಿದ್ಧೇಶ್ವರ ಮಠ, ನಗರೇಶ್ವರ ರಾಮಮಂದಿರ, ಶ್ರೀ ಏಕನಾಥ ಮಹಾರಾಜ್ ಮಂದಿರ, ರೇವಣಾಸಿದ್ಧೇಶ್ವರ ಕಾಲೋನಿಯ ರೇವಣಾಸಿದ್ಧೇಶ್ವರ ಗುಡಿ ಸೇರಿ ಇನ್ನಿತರ ದೇಗುಲಗಳಲ್ಲಿ ತಿಂಗಳ ಕಾಲ ಸಂಜೆ ಭಜನೆ ಕೈಗೊಂಡ ಶ್ರಾವಣ ಸಂಪನ್ನದಲ್ಲಿ ಖಾಂಡ್ ನೆರವೇರಲಿವೆ.
ಗ್ರಾಮೀಣ ಆರಾಧನೆ: ಗ್ರಾಮೀಣ ಪ್ರದೇಶದ ತಾಲೂಕಿನ ಜಿಡಗಾ ನವಕಲ್ಯಾಣ ಮಠ, ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠ, ಖಜೂರಿ ಶ್ರೀ ಕೋರಣೇಶ್ವರ ಮಠ, ನರೋಣಾದ ಶ್ರೀ ಕ್ಷೇಮಲಿಂಗೇಶ್ವರ ದೇವಸ್ಥಾನ, ಸಾಲೇಗಾಂವ ಮಹಾದೇವಲಿಂಗ, ಖಂಡಾಳ ರಾಮಲಿಂಗೇಶ್ವರ ದೇವಸ್ಥಾನ, ನಿಂಬರಗಾದ ಶ್ರೀ ಶರಣಬಸವೇಶ್ವರ ದೇವಸ್ಥಾನ, ರುದ್ರವಾಡಿ ಮಲ್ಲಿಕಾರ್ಜುನ ದೇವಸ್ಥಾನ, ಮಾಡಿಯಾಳ ಮಲ್ಲಯ್ಯನ ದೇವಸ್ಥಾನ ತಡಕಲ್‍ದ ಮಲ್ಲಯ್ಯನ ದೇವಸ್ಥಾನ, ಬಸವಣ್ಣ ಸಂಗೋಳಗಿ ಬಸವಣ್ಣದೇವರು, ಯಳಸಂಗಿ ಸಿದ್ಧರೋಢ ಮಠ, ಗುರುಪಾದಲಿಂಗೇಶ್ವರ ಮಠದಲ್ಲಿ, ಧುತ್ತರಗಾಂವ ಶ್ರೀ ವಿರೇಶ್ವರ ದೇವಸ್ಥಾನ, ಕಡಗಂಚಿ ಶ್ರೀ ಶಾಂತಲಿಂಗೇಶ್ವರ, ಮುನ್ನೊಹಳ್ಳಿಯ ಶ್ರೀ ಗಜೇಶ ಮಸಣ್ಣಯ್ಯ ದೇವಸ್ಥಾನ, ಹಿರೋಳಿಯ ಸೋಮೇಶ್ವರ ದೇವಸ್ಥಾನ, ಜಾವಳಿ ಡಿ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ, ಭೂಸನೂರ ಮಠ, ನಿಂಬಾಳದ ಜಡೆಯ ಶಾಂತಲಿಂಗೇಶ್ವರ ಮಠ, ಹೀಗೆ ಹಲವು ಗ್ರಾಮಗಳಲ್ಲಿ ದೇವಸ್ಥಾನ ಮಠಗಳಲ್ಲಿ ಶ್ರಾವಣ ಮಾಸದಂಗವಾಗಿ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ, ಪೂಜೆ ಭಕ್ತಾದಿಗಳು ನೆರವೇರಿಸುವರು.